ಸೋಮವಾರಪೇಟೆ, ಆ. 4: ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಸೀಲ್‍ಡೌನ್ ಪ್ರದೇಶಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.
ಪಟ್ಟಣದ ಈರ್ವರು ಸರ್ಕಾರಿ ನೌಕರರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿರುವ ಹಿನ್ನೆಲೆ ರೇಂಜರ್ ಬ್ಲಾಕ್‍ನ ರೇಂಜರ್ ವಸತಿಗೃಹ, ಬ್ಯಾಂಕ್ ಉದ್ಯೋಗಿ ವಾಸವಿದ್ದ ಎಸ್‍ಬಿಐ ಬ್ಯಾಂಕ್ ಕಟ್ಟಡದ ಕೆಳ ಅಂತಸ್ತಿನ ಮನೆಗಳನ್ನು ತಾಲೂಕು ಕಚೇರಿಯ ಅಧಿಕಾರಿಗಳು ಸೀಲ್‍ಡೌನ್ ಮಾಡಿದ್ದಾರೆ.
ಇದರೊಂದಿಗೆ ಐಗೂರಿನ ಗ್ರಾ.ಪಂ. ಕಚೇರಿ ಸಮೀಪ, ಗರಗಂದೂರಿನ ಲಕ್ಕೇರಿ ಎಸ್ಟೇಟ್, ಮಾದಾಪುರದ ಮಾರ್ಕೆಟ್‍ರಸ್ತೆ, ಹುದುಗೂರಿನ ಕಾಳಿದೇವನ ಹೊಸೂರು ಹಾಡಿ, ಚೌಡ್ಲು ಗ್ರಾ.ಪಂ.ನ ಗಾಂಧಿನಗರಗಳ ಕೆಲ ಮನೆಗಳನ್ನು ಸೀಲ್‍ಡೌನ್ ಮಾಡಲಾಗಿದೆ.