ಕಲಿಯುಗದ ಕಾಮಧೇನು ಎನಿಸಿದ ಶ್ರೀ ರಾಘವೇಂದ್ರ ಗುರುಗಳ 349ನೇ ಆರಾಧನೆಯು ತಾ. 5ರಂದು (ಇಂದು) ನಡೆಯಲಿದೆ.

ಶ್ರೀ ಗುರು ರಾಘವೇಂದ್ರರ ವಿಶೇಷ ಪೂಜಾ ಆರಾಧನೆಯನ್ನು ದೇಶಾದ್ಯಂತ ಆಚರಿಸುವುದು. ಶ್ರಾವಣ ಮಾಸದ ವೈಶಿಷ್ಟ್ಯ. ಗುರುರಾಯರು ಮಂತ್ರಾಲಯ ಸುಕ್ಷೇತ್ರದಲ್ಲಿ ಸಶರೀರವಾಗಿ ಬೃಂದಾವನ ಪ್ರವೇಶ ಮಾಡಿದ ದಿನವಿದು.

ಶ್ರೀ ರಾಘವೇಂದ್ರ ಸ್ವಾಮಿಗಳು ಜನಿಸಿದ್ದು ತಮಿಳುನಾಡಿನ ಕಾವೇರಿ ಪಟ್ಟಣದ ಭುವನಗಿರಿಯಲ್ಲಿ. ತಿರುಮಲದ ಶ್ರೀನಿವಾಸನ ಅನುಗ್ರಹದಿಂದ ಫಾಲ್ಗುಣ ಶುದ್ಧ ಸಪ್ತಮಿ ಗುರುವಾರ, ಆದ್ದರಿಂದ ರಾಯರ ಆರಾಧನೆಗೆ ಗುರುವಾರ ಶ್ರೇಷ್ಠವೆಂಬ ನಂಬಿಕೆಯಿದೆ.

ಗುರುಗಳ ಬೃಂದಾವನಕ್ಕೆ ಹಚ್ಚಿದ ಮೃತ್ತಿಕೆ, ಗಂಧ, ವಸ್ತ್ರ, ತುಳಸಿಯು ಭಕ್ತರ ಬಹುವಿಧ ಬೇನೆ ಬೇಸರಿಕೆಗಳನ್ನು ಹೋಗಲಾಡಿಸುತ್ತದೆ ಎಂಬ ಬಲವಾದ ನಂಬಿಕೆಯೂ ಇದೆ. ಅವರ ಪಾದೋದಕವು ಮಂತ್ರ ಪೂತ ಜಲದಂತೆ ಭಕ್ತರ ಭಯಂಕರ ರೋಗಾದಿ ಉಪದ್ರವವನ್ನು ನಿವಾರಿಸುತ್ತವೆ. ಹಾಗೆಯೇ ರಾಯರ ಪ್ರಭಾವ - ಪವಾಡಗಳಿಂದ ಪ್ರಭಾವಿತರಾದ ಜನರ ಸೌಹಾರ್ದವನ್ನು ಹೆಚ್ಚುವಂತೆ ಮಾಡಿದರು.

ರಾಯರು ಪ್ರಹ್ಲಾದರಾಗಿ ಭೂಲೋಕದಲ್ಲಿ ಜನಿಸಿ, ಮುಂದಿನ ಜನ್ಮದಲ್ಲಿ ವ್ಯಾಸರಾಯರಾಗಿ ಜನಿಸಿದರು. ಆ ಅವರಾತದ ಬಳಿಕ ಶ್ರೀ ರಾಘವೇಂದ್ರ ತೀರ್ಥರಾಗಿ ಮಂತ್ರಾಲಯದಲ್ಲಿ ನೆಲೆಸಿದರು. ಮೂಲ ರಾಮದೇವರ ಪೂಜಾ ಕೈಂಕರ್ಯ, ಜಪ-ತಪ, ನಿರತರಾಗಿ, ಜನಾನುರಾಗಿ ಯತಿಗಳಾಗಿ ಹೊರಹೊಮ್ಮಿದ ರಾಯರು ಭಕ್ತರ ಅಭೀಷ್ಟಗಳನ್ನು ಪೂರೈಸುವಲ್ಲಿ ಸಿದ್ಧ ಹಸ್ತರಾದರು. ಭಕ್ತರು ಅವರನ್ನು ‘ಪೂಜ್ಯಾಯ ರಾಘವೇಂದ್ರಾಯ, ಸತ್ಯಧರ್ಮ ರತಾಯಚ, ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನವೇ’ ಎಂದು ಭಕ್ತಿಯಿಂದ ನಮಿಸುತ್ತಾರೆ. ಸ್ತುತಿಸುತ್ತಾರೆ. ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಪ್ರಸಿದ್ಧರಾದ ಗುರುರಾಯರು ತೋರಿದ ಪವಾಡಗಳು ಅಪಾರ.

ರಾಯರು ಸಶರೀರವಾಗಿ ಬೃಂದಾವನ ಪ್ರವೇಶ ಮಾಡುವ ಮೊದಲು 700 ವರ್ಷ ಬೃಂದಾವನದಲ್ಲಿದ್ದು, ಭಕ್ತರ ಸಂಕಷ್ಟ ಪರಿಹರಿಸುವುದಾಗಿ ವಚನ ನೀಡಿದ್ದರೆಂಬುದು ಇತಿಹಾಸ.

ಮಂತ್ರಾಲಯಕ್ಕೆ ತೆರಳುವವರು ಈ ಕೆಳಗಿನವರನ್ನು ಸಂಪರ್ಕಿಸಬಹುದು.

ಪ್ರಭಾಕರರಾವ್-ಆಡಳಿತಾಧಿಕಾರಿ- 09848013992, ನರಸಿಂಹಮೂರ್ತಿ, ಚೀಫ್ ಪಿ.ಆರ್.ಓ. 09866031851

ಕೊನೆಯ ನುಡಿ : ಆ ಕರುಣಾಳು ಗುರುರಾಯರು ಈಗ ದೇಶಕ್ಕೆ ಬಂದೊದಗಿರುವ ಕೊರೊನಾ ಸಂಕಷ್ಟದಿಂದ ನಮ್ಮೆಲ್ಲರನ್ನು ಪಾರು ಮಾಡುವಂತಾಗಲಿ ಎಂದು ಭಕ್ತಿಪೂರ್ವಕವಾಗಿ ಬೇಡೋಣ - ನಮಿಸೋಣ.

ಬೈ.ಶ್ರೀ. ಪ್ರಕಾಶ್ ಮಡಿಕೇರಿ.