ಮಡಿಕೇರಿ, ಆ. 3: ಜಿಲ್ಲೆಯಲ್ಲಿ ಹೊಸದಾಗಿ 41 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಓರ್ವ ಸಾವನ್ನಪ್ಪಿದ್ದಾರೆ. ಇದುವರೆಗೆ 513 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 335 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಒಟ್ಟು 10 ಮಂದಿ ಸಾವನ್ನಪ್ಪಿದ್ದು, 168 ಪ್ರಕರಣಗಳು ಸಕ್ರಿಯವಾಗಿವೆ.ಸೋಂಕಿತ ಮೃತಜಿಲ್ಲೆಯಲ್ಲಿ ಕೋವಿಡ್-19 ರ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ.ಮಡಿಕೇರಿಯ ಮಹದೇವಪೇಟೆ ಬಳಿಯ ಅಬ್ದುಲ್ ಕಲಾಂ ಲೇಔಟ್‍ನ ನಿವಾಸಿ, 64 ವರ್ಷದ ಪುರುಷರೊಬ್ಬರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದ ಕೆಲ ದಿನಗಳಿಂದ ಅವರಲ್ಲಿ ಕೆಮ್ಮು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡುವಂತೆ ಸಲಹೆ ನೀಡಿದ್ದು, ತಾ.2 ರಂದು ಸಂಜೆ ಸುಮಾರು 7 ಗಂಟೆಗೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ರ್ಯಾಪಿಡ್ ಆ್ಯಂಟಿಜನ್ ಕಿಟ್ ಮೂಲಕ ಇವರ ಗಂಟಲು/ಮೂಗು ದ್ರವ ಮಾದರಿಯನ್ನು ಪರೀಕ್ಷಿಸಲಾಯಿತು. ಇವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು ತಕ್ಷಣ ಚಿಕಿತ್ಸೆ ಪ್ರಾರಂಭಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ 9.30 ಗಂಟೆಗೆ ನಿಧನಹೊಂದಿದ್ದಾರೆ. ಮೃತ ದೇಹದ ಅಂತ್ಯ ಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನೆರವೇರಿಸಲಾಯಿತು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸ ಪ್ರಕರಣಗಳ ವಿವರ ವೀರಾಜಪೇಟೆಯ ವಡ್ಡರಮಾಡುವಿನ 38 ವರ್ಷದ ಪುರುಷ, 10 ಮತ್ತು 12 ವರ್ಷದ ಬಾಲಕ, 30 ವರ್ಷದ ಮಹಿಳೆ, 4, 10 ಮತ್ತು 11 ವರ್ಷದ ಬಾಲಕರು, 14 ವರ್ಷದ ಬಾಲಕಿ, 45 ವರ್ಷದ ಪುರುಷ, 16 ವರ್ಷದ ಬಾಲಕಿ, 47 ವರ್ಷದ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು ಪ್ರಯಾಣದ ಇತಿಹಾಸವಿರುವ ವೀರಾಜಪೇಟೆ ಚಿಕ್ಕಪೇಟೆಯ 29 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ ಅಬ್ದುಲ್ ಕಲಾಂ ಲೇಔಟ್‍ನ 64 ವರ್ಷದ ಪುರುಷ (ಮೃತಪಟ್ಟಿದ್ದಾರೆ). ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಸೋಮವಾರಪೇಟೆಯ ಅಬ್ಬೂರುಕಟ್ಟೆಯ 50 ವರ್ಷದ ಮಹಿಳೆ ಹಾಗೂ ವೀರಾಜಪೇಟೆಯ ಚಾರ್ಮುಡಿಯ 57 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಭಾಗಮಂಡಲದ ಪೆÇಲೀಸ್ ಠಾಣೆಯ 26 ವರ್ಷದ ಪುರುಷ ಪೊಲೀಸ್ ಸಿಬ್ಬಂದಿ, ಭಾಗಮಂಡಲ ಎಎನ್‍ಎಫ್ ವಸತಿ ಗೃಹದ 43 ವರ್ಷದ ಪುರುಷ ಸಿಬ್ಬಂದಿ. ಸುಂಟಿಕೊಪ್ಪದ ಅಂದಗೋವೆಯ 40 ವರ್ಷದ ಪುರುಷ, ಸುಂಟಿಕೊಪ್ಪದ ಹರದೂರು ಗುಂಡಿಕುಟ್ಟಿಯ 30 ವರ್ಷದ ಮಹಿಳೆ ಮತ್ತು 09 ತಿಂಗಳ ಮಗು, ಕುಶಾಲನಗರ ನವಗ್ರಾಮದ ಕುಡ್ಲೂರುವಿನ 13 ವರ್ಷದ ಬಾಲಕಿ, ಸೋಮವಾರಪೇಟೆಯ ಅಬ್ಬೂರುಕಟ್ಟೆಯ 56 ಮತ್ತು 38 ವರ್ಷದ ಪುರುಷರು ಹಾಗೂ ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 42 ವರ್ಷದ ಪುರುಷ, ಸೋಮವಾರಪೇಟೆಯ ಚೌಡ್ಲು ಗಾಂಧೀನಗರದ 39 ವರ್ಷದ ಮಹಿಳೆ ಮತ್ತು 22 ವರ್ಷದ ಪುರುಷ, ಕೊಡ್ಲಿಪೇಟೆಯ (ಮೊದಲ ಪುಟದಿಂದ) ಬೆಂಬ್ಲೂರು ಅಂಚೆಯ ಸಿರಾ ಗ್ರಾಮದ 33 ವರ್ಷದ ಪುರುಷ, ಚೆಟ್ಟಳ್ಳಿ ಶ್ರೀಮಂಗಲ ಚೇರಳದ 11 ವರ್ಷದ ಬಾಲಕಿ, ಸೋಮವಾರಪೇಟೆಯ ಐಗೂರು ಅಂಚೆಯ ಕಾಜೂರು ಗ್ರಾಮದ 39 ವರ್ಷದ ಪುರುಷ ಹಾಗೂ ಸ್ಪ್ರಿಂಗ್ ವ್ಯಾಲಿ ಸಮೀಪದ 46 ವರ್ಷದ ಮಹಿಳೆ. ಕುಶಾಲನಗರದ ಮಾದಲಾಪುರ ಬಾಡಬೆಟ್ಟದ 32 ಮತ್ತು 65 ವರ್ಷದ ಪುರುಷರು. ಮಡಿಕೇರಿಯ ಎಲ್‍ಐಸಿ ವಸತಿ ಗೃಹದ 55 ವರ್ಷದ ಪುರುಷ ಮತ್ತು 44 ವರ್ಷದ ಮಹಿಳೆ, ಕುಶಾಲನಗರ ಮುಳ್ಳುಸೋಗೆ ಕುವೆಂಪು ಲೇಔಟ್‍ನ 60 ವರ್ಷದ ಪುರುಷ, ವೀರಾಜಪೇಟೆ ಕುಂಜಿಲಗೇರಿಯ 19 ವರ್ಷದ ಮಹಿಳೆ, ವೀರಾಜಪೇಟೆಯ ನಾತಂಗಾಲದ 55 ವರ್ಷದ ಮಹಿಳೆ, ಮಡಿಕೇರಿ ಪೆÇಲೀಸ್ ವಸತಿ ಗೃಹದ 44 ವರ್ಷದ ಮಹಿಳೆ. ವೀರಾಜಪೇಟೆಯ ಸುಂಕದಕಟ್ಟೆಯ 44 ವರ್ಷದ ಮಹಿಳೆ, 28 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಹೊಸ ನಿಯಂತ್ರಿತ ಪ್ರದೇಶಗಳು

ವೀರಾಜಪೇಟೆಯ ಚಿಕ್ಕಪೇಟೆ, ವಡ್ಡರಮಾಡು, ಸೋಮವಾರ ಪೇಟೆಯ ಅಬ್ಬೂರುಕಟ್ಟೆ, ಕಾಕೋಟುಪರಂಬು, ಮಡಿಕೇರಿಯ ಅಬ್ದುಲ್‍ಕಲಾಂ ಲೇಔಟ್, ಭಾಗ ಮಂಡಲದ ಎಎನ್‍ಎಫ್ ಕ್ವಾರ್ಟಸ್, ಅಂದಗೋವೆ, ಕೂಡ್ಲೂರು ನವಗ್ರಾಮ, ಕೊಡ್ಲಿಪೇಟೆಯ ಶಿರಾ ಗ್ರಾಮ, ಚೇರಳ, ಕಾಜೂರು ಗ್ರಾಮ, ಐಗೂರಿನ ಸ್ಪ್ರಿಂಗ್ ವ್ಯಾಲಿ ಹತ್ತಿರ, ಮಾದಲಾಪುರ, ಕುಶಾಲನಗರದ ಕುವೆಂಪು ಲೇಔಟ್, ಮುಳ್ಳುಸೋಗೆ, ಕುಂಜಿಲಗೇರಿ, ನಾತಂಗಾಲ ಹಾಗೂ ಸುಂಕದಕಟ್ಟೆಯಲ್ಲಿ ಹೊಸ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.

ಕಾರಗುಂದ ಕಡಿಯತ್ತೂರು ಮತ್ತು ತೊತೇರಿಗಳಲ್ಲಿನ ನಿಯಂತ್ರಿತ ವಲಯಗಳನ್ನು ತೆರೆದು ಸಾರ್ವಜನಿಕ ರಿಗೆ ಮುಕ್ತಗೊಳಿಸ ಲಾಗಿದೆ.