ಸೋಮವಾರಪೇಟೆ, ಆ.3: 1990ರಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಸಂಬಂಧ ನಡೆದ ಕರಸೇವೆಯಲ್ಲಿ ಭಾಗಿಯಾಗಿದ್ದ ಸೋಮವಾರಪೇಟೆಯ ಕುಂದಳ್ಳಿ ಗ್ರಾಮ ನಿವಾಸಿ ದಿನೇಶ್ ಅವರನ್ನು, ಪಟ್ಟಣದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಲಾಯಿತು.
ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂಪರ ಸಂಘಟನೆಯ ಮೃತ್ಯುಂಜಯ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಪಕ್ಷದ ಕಾರ್ಯಕರ್ತರಾದ ಕಿಬ್ಬೆಟ್ಟ ಮಧು, ಜೀವನ್, ಜಗನ್ನಾಥ್, ಚೇತನ್, ಪ್ರಕಾಶ್, ವಿವೇಕಾನಂದ ಯೂತ್ ಅಸೋಸಿಯೇಷನ್‍ನ ಅಭಿಷೇಕ್ ಗೋವಿಂದಪ್ಪ, ಜೈಜವಾನ್ ಮಾಜೀ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದು, ಸನ್ಮಾನಿಸಿದರು.
ಕರಸೇವೆಯಲ್ಲಿ ಭಾಗಿಯಾಗಿದ್ದ ಕುಂದಳ್ಳಿ ಗ್ರಾಮದ ದಿನೇಶ್ ಅವರು, ಅಂದಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.