ಮಡಿಕೇರಿ, ಆ. 3: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರಕ್ಕೆ ಶಿಲಾನ್ಯಾಸ ಹಿನ್ನೆಲೆ ಕೊಡಗು ಜಿಲ್ಲೆಯ ಕೆಲವೆಡೆ ಶಾಂತಿ ಸಭೆ ನಡೆಸಲಾಯಿತು.
ಶ್ರೀಮಂಗಲ: ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಉಪ ನಿರೀಕ್ಷಕ ಮಂಚಯ್ಯ ಮುಂದಾಳತ್ವದಲ್ಲಿ ಗ್ರಾಮಸ್ಥರೊಂದಿಗೆ ರಾಮಮಂದಿರಕ್ಕೆ ಭೂಮಿಪೂಜೆ ನೆರವೇರಿಸುವ ದಿನದಂದು ಗ್ರಾಮಗಳಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳ ಮಾಹಿತಿಯನ್ನು ಸಾರ್ವಜನಿಕರ ಸಭೆಯಲ್ಲಿ ಕಲೆ ಹಾಕಿದರು.
ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ತಾ. 5 ರಂದು ನಡೆಯಲಿರುವ ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆ ನಡೆಯುವ ದಿನ ಗ್ರಾಮಗಳ ದೇವಸ್ಥಾನಗಳಲ್ಲಿ ಪೂಜೆ, ಧ್ವಜಾರೋಹಣದ ಬಗ್ಗೆ ನಡೆಸಲಿರುವ ಬಗ್ಗೆ ತಿಳಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಕುಞ್ಞಂಗಡ ಅರುಣ್ ಭೀಮಯ್ಯ, ತಾಲೂಕು ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ತಾಲೂಕು ಬಿಜೆಪಿ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಸಾಮಾಜಿಕ ಜಾಲತಾಣದ ಮುಖಂಡ ಚೆಟ್ಟಂಗಡ ಮಹೇಶ್ ಮಂದಣ್ಣ, ಹಿಂದೂಪರ ಸಂಘಟನೆಯ ಕಾರ್ಯಕರ್ತರಾದ ಕಟ್ಟೇರ ಚೋಟು ಬೋಪಣ್ಣ, ಮಾಣೀರ ಬೋಪಣ್ಣ, ಕಳ್ಳಂಗಡ ಕಾಳು, ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾದ ಸದಸ್ಯರಾದ ಕಟ್ಟೇರ ಕವನ್, ಕಾಳಿಮಾಡ ಸೂರಜ್, ಕಳ್ಳಂಗಡ ರಜಿ ಇದ್ದರು.
ಕೂಡಿಗೆ: ಕುಶಾಲನಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಹಿಂದೂ ಮುಖಂಡರ ಸಭೆಯು ಠಾಣಾಧಿಕಾರಿ ನಂದೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಠಾಣೆಯ ಸಭಾಂಗಣದಲ್ಲಿ ನಡೆಯಿತು.
ತಾ. 5 ರಂದು ಅಯೋಧ್ಯೆಯಲ್ಲಿ ನೆಡೆಯುವ ರಾಮ ಜನ್ಮ ಭೂಮಿಯ ಭೂಮಿ ಪೂಜೆಯ ಕಾರ್ಯಕ್ರಮದ ಅಡಿಯಲ್ಲಿ ಅನುಸರಿಸಬೇಕಾದ ಕಾನೂನು ನಿಯಮಗಳನ್ನು ತಿಳಿಸಿದರು ಈ ಸಂದರ್ಭದಲ್ಲಿ ಕೆ. ವರದ, ಕೆ.ಕೆ. ಭೋಗಪ್ಪ, ರಾಜೀವ್, ಆರ್. ಕೃಷ್ಣ, ಅವಿನಾಶ್, ವೀನು, ಚಿಣ್ಣಪ್ಪ, ಸುಬ್ಬಯ್ಯ, ಧರ್ಮ ಸೇರಿದಂತೆ ಹಲವಾರು ಮಂದಿ ಇದ್ದರು.
ಶನಿವಾರಸಂತೆ: ಅಯೋಧ್ಯೆ ಶ್ರೀ ರಾಮಮಂದಿರಕ್ಕೆ ಶಿಲಾನ್ಯಾಸ ಕಾರ್ಯ ಕ್ರಮದ ಪ್ರಯುಕ್ತ ಶನಿವಾರಸಂತೆ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಶಾಂತಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಠಾಣಾಧಿಕಾರಿ ಹೆಚ್.ಇ. ದೇವರಾಜ್ ವಹಿಸಿ ಮಾತನಾಡುತ್ತಾ, ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಸೌಹಾರ್ದ ವಾತಾವರಣ ಸೃಷ್ಟಿಸಬೇಕೆಂದು ತಿಳಿಸಿದರು. ಆ ದಿನ ಸಾರ್ವಜನಿಕವಾಗಿ ವಿಜಯೋತ್ಸವ ಆಚರಿಸುವುದಾಗಲಿ, ಸಿಡಿ ಮದ್ದು ಸಿಡಿಸುವುದಾಗಲಿ, ಘೋಷಣೆಗಳನ್ನು ಕೂಗುವುದಾಗಲಿ ಮಾಡಬಾರದು. ಮೆರವಣಿಗೆಯನ್ನು ನಿಷೇಧಿಸಲಾಗಿದೆ ಎಂದು ಸೂಚಿಸಿದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವವರು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು ಮತ್ತು ಅಂತರವನ್ನು ಕಾಯ್ದುಕೊಂಡು, ಸ್ಯಾನಿಟೈಸರನ್ನು ಬಳಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಸಹಾಯಕ ಠಾಣಾಧಿಕಾರಿಗಳಾದ ಕೃಷ್ಣೇಗೌಡ, ಹೆಚ್.ಎಂ. ಗೋವಿಂದ್, ಶಿವಲಿಂಗ, ಹೆಡ್ಕಾನ್ಸ್ಟೇಬಲ್ಗಳಾದ ಬೋಪಣ್ಣ, ರವಿಚಂದ್ರ, ಶಶಿಕುಮಾರ್, ವಿವೇಕ್, ಜಿಲ್ಲಾ ಜನತಾದಳದ ಮುಖಂಡ ಎಂ.ಎ. ಆದಿಲ್ ಪಾಶ, ಜಾಮೀಯ ಮಸೀದಿ ಅಧ್ಯಕ್ಷ ಕೆ.ಎಂ. ಅಮೀರ್ ಸಾಬ್, ಮಾಜಿ ಅಧ್ಯಕ್ಷ ಅಕ್ಮಲ್ ಪಾಶ, ಕಾಂಗ್ರೆಸ್ ಮುಖಂಡರುಗಳಾದ ಎಸ್.ಸಿ. ಶರತ್ಶೇಖರ್, ಬಿ.ಟಿ. ರಂಗಸ್ವಾಮಿ, ಮುಸ್ತಫ, ಮಹೇಶ್, ಶುಕೂರ್, ಜಾಮೀದ್ ಪಾಶ, ಅಬ್ದುಲ್ ರಜಾಕ್, ಹಮೀದ್ ಇತರರು ಉಪಸ್ಥಿತರಿದ್ದರು. ಕಾನ್ಸ್ಟೇಬಲ್ಗಳಾದ ಶಫೀರ್ ಸ್ವಾಗತಿಸಿ, ವಿನಯ ವಂದಿಸಿದರು.