ಮಡಿಕೇರಿ, ಆ. 3: ಕೈಕೇರಿ ಗುಡ್ಡೆಮನೆ ನಿವಾಸಿ, ನಿವೃತ್ತ ದೈಹಿಕ ಶಿಕ್ಷಕ ವಿ.ಕೆ. ತಿಮ್ಮಯ್ಯ (62) ಅವರು ತಾ. 3 ರಂದು ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಭಾಸ್ಕೆಟ್ ಬಾಲ್ ತೀರ್ಪುಗಾರರಾಗಿ, ಉತ್ತಮ ಅಥ್ಲೀಟ್ ಆಗಿ, ಹಾಕಿ ಗೋಲ್ ಕೀಪರ್ ಆಗಿ ಈ ಹಿಂದೆ ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದ ತಿಮ್ಮಯ್ಯ ಅವರಿಂದ ತರಬೇತಿ ಪಡೆದ ಸಾಕಷ್ಟು ಮಂದಿ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ.