ಸಂಪಾಜೆ, ಆ. 2: ಕರ್ನಾಟಕ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಂಪಾಜೆ ಗ್ರಾಮದ ಶಾಲಾ ವಠಾರದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.

ಸಂಪಾಜೆ ಗ್ರಾಮದ ಬಿಜೆಪಿ ಹಿರಿಯ ಪ್ರಮುಖ ರಮಾನಂದ ಬಾಳಕಜೆ, ಸಂಪಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್ ಚೆದ್ಕಾರ್, ಪ್ರಶಾಂತ್ ಪಂಜಿಕಲ್ಲು, ರಂಜನ್ ಬಾಲಂಬಿ, ಶಭರೀಶ್ ಕುದ್ಕುಳಿ ಹಾಗೂ ಶಾಲಾ ಮುಖ್ಯ ಶಿಕ್ಷಕರು, ಬೋಧಕ ವೃಂದದವರು ಹಾಜರಿದ್ದರು.