ನಾಪೋಕ್ಲು, ಆ. 2: ಸಮೀಪದ ಚೆಯ್ಯಂಡಾಣೆಯ ಅಯ್ಯಪ್ಪ ಯುವಕ ಸಂಘದ ಆವರಣದಲ್ಲಿ ಮಡಿಕೇರಿ ತಾಲೂಕು ರೈತ ಮೋರ್ಚಾ ಸದಸ್ಯ ತೋಟಂಬೈಲು ಅನಂತಕುಮಾರ್ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸಿದ ಸಲುವಾಗಿ ನರಿಯಂದಡ ಗ್ರಾಮ ಪಂಚಾಯಿತಿಯ ಬಿ ಬ್ಲಾಕ್ ಪಂಚಾಯಿತಿ ಭಾಗದ ಚೆಯ್ಯಂಡಾಣೆಯ ಸ್ಥಾನೀಯ ಸಮಿತಿ ಅಧ್ಯಕ್ಷ ಪೊಕ್ಕೋಳಂಡ್ರ ಧನೋಜ್ ಹಾಗೂ ನರಿಯಂದಡ, ಎಡಪಾಲ ಗ್ರಾಮ ಪಂಚಾಯಿತಿಯ ತೋಟಂಬೈಲು ಅನಂತಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಮಡಿಕೇರಿ ಗ್ರಾಮಾಂತರ ಯುವ ಮೋರ್ಚಾ ಸದಸ್ಯ ಪವನ್ ತೋಟಂಬೈಲು, ಕಾರ್ಯಕರ್ತರಾದ ಬಿಳಿಯಂಡ್ರ ಅಭಿಷೇಕ್, ಮಂಞಪುರ ತನು, ಮಹಿಳಾ ಕಾರ್ಯಕರ್ತರಾದ ಪೊಕ್ಕೋಳಂಡ್ರ ನಂದಿನಿ, ಧನ್ಯ, ಮಮತ, ರಿಷಿಕ್, ಕಿರಣ್ಯ ರಿಯಾಂಕ, ಶಾನಿಕ ಪಾಲ್ಗೊಂಡಿದ್ದರು.