ಸೋಮವಾರಪೇಟೆ,ಆ.1: ಮುತ್ಸದ್ಧಿ ರಾಜಕಾರಣಿ, ವಿಧಾನ ಪರಿಷತ್ ಮಾಜೀ ಸದಸ್ಯರಾಗಿದ್ದ ಬಿ.ಬಿ. ಶಿವಪ್ಪ ಅವರ ಸಂಸ್ಮರಣೆ ಕಾರ್ಯಕ್ರಮ ಪಟ್ಟಣದ ವಿದ್ಯಾ ಗಣಪತಿ ದೇವಾಲಯದಲ್ಲಿ ನಡೆಯಿತು.

ಪಕ್ಷದ ಪ್ರಮುಖರಾದ ಡಿ.ವಿ. ಸದಾನಂದ ಮಾತನಾಡಿ, ಬಿಜೆಪಿ ಪಕ್ಷ ರಾಜ್ಯದಲ್ಲಿ ಸಂಘಟನೆಗೊಳ್ಳಲು ಬಿ.ಬಿ. ಶಿವಪ್ಪ ಅವರ ಶ್ರಮ ಅಪಾರ ಎಂದು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಸಿ.ಪಿ. ಗೋಪಾಲ್, ಉಮೇಶ್, ರಾಘವ, ಶಿವಕುಮಾರ್, ಮಹೇಶ್, ಎಸ್.ಪಿ. ಪ್ರಸನ್ನ, ಹಾಲೇರಿ ದಿನೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.