ಪೆÇನ್ನಂಪೇಟೆ, ಆ.2: ಇಲ್ಲಿನ ಗ್ರಾ. ಪಂ. ವ್ಯಾಪ್ತಿಯ ಒಂದನೇ ವಿಭಾಗದ ಮಹಾತ್ಮ ಗಾಂಧಿ ನಗರದ (ಎಂ.ಜಿ ನಗರ) ಕೋವಿಡ್ ಸಂಬಂಧಿತ ಸೀಲ್‍ಡೌನ್ ಪ್ರದೇಶಕ್ಕೆ ಸ್ಥಳೀಯ ಯುವಕರು ಸೇರಿ ದಾನಿಗಳ ನೆರವಿನಿಂದ ಅಗತ್ಯ ದಿನಸಿ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು. ಸ್ಥಳೀಯ ಯುವಕರ ತಂಡ 10 ದಿನಗಳಿಗೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಅಲ್ಲಿನ 13 ಕುಟುಂಬಗಳಿಗೆ ವಿತರಿಸಿದರು.
ಈ ಪ್ರದೇಶದ ಸುಮಾರು 15ಕ್ಕೂ ಹೆಚ್ಚು ಯುವಕರು ತಾವೇ ಸ್ವತಃ ಕೈಯಿಂದ ಹಣ ಹಾಕಿ ಎಂ.ಜಿ. ನಗರದ ಪ್ರವೇಶದ್ವಾರದಲ್ಲಿ ಟೆಂಟ್ ನಿರ್ಮಿಸಿ ಸ್ವಯಂ ಪ್ರೇರಣೆಯಿಂದ ಕೊರೊನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಂ.ಜಿ. ನಗರಕ್ಕೆ ಬರುವ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಿ ನಂತರ ಅವರಿಗೆ ಸ್ಯಾನಿಟೈಸರ್ ನೀಡಲಾಗುತ್ತಿದೆ. ಸ್ಥಳೀಯ ಗ್ರಾ.ಪಂ. ಮತ್ತು ಪೆÇಲೀಸ್ ಇಲಾಖೆಯ ಸಹಕಾರ ಪಡೆದು ಈ ಯುವಕರ ತಂಡ ಕಾರ್ಯನಿರ್ವಹಿಸುತ್ತಿದೆ.