ಕೊಡ್ಲಿಪೇಟೆ, ಆ.2: ಕೊಡ್ಲಿಪೇಟೆ ರೋಟರಿ ಹೇಮಾವತಿ ಸಂಸ್ಥೆಯ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಪ್ಲಾಂಟರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ನಿರ್ಗಮಿತ ಅಧ್ಯಕ್ಷ ಹೆಚ್.ಜೆ. ಪ್ರವೀಣ್ ನೂತನ ಅಧ್ಯಕ್ಷ ಹೆಚ್.ಎಂ.ದಿವಾಕರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವಲಯ ನಿಕಟಪೂರ್ವ ರೋಟರಿ ರಾಜ್ಯಪಾಲ ಸದಾನಂದ ಪದಗ್ರಹಣ ಸಮಾರಂಭದಲ್ಲಿ ಉಪಸ್ಥಿತರಿದ್ದು, ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಮುಖ್ಯ ಅತಿಥಿಗಳಾಗಿದ್ದ ವಲಯ ಉಪರಾಜ್ಯಪಾಲ ಪಿ.ಕೆ. ರವಿ, ನೂತನ ಅಧ್ಯಕ್ಷ ದಿವಾಕರ್, ವಲಯ ಲೆಫ್ಟಿನೆಂಟ್ ಜೇಕಬ್, ಪ್ರವೀಣ್ ಹೆಚ್.ಜೆ., ಯು.ಹೆಚ್. ಲೋಕೇಶ್, ಡಿ.ಎಸ್. ಯತೀಶ್, ಭಾನುಪ್ರಕಾಶ್, ಮಾಧವಲಾಲ್, ಸುಬ್ರಹ್ಮಣ್ಯಾಚಾರ್, ಸಾಗರ್, ಸಂಜಯ್, ಭಾನುಪ್ರಕಾಶ್, ಸಿದ್ದೇಶ್, ಸೇರಿದಂತೆ ರೋಟರಿ ಸದಸ್ಯರು ಉಪಸ್ಥಿತರಿದ್ದರು. ಸಂಸ್ಥೆಯ ನೂತನ ಪ್ರಧಾನ ಕಾರ್ಯದರ್ಶಿ ಅಮೃತ್‍ಕುಮಾರ್ ಸದಸ್ಯರುಗಳಾಗಿ ಮನುಕುಮಾರ್, ರಮೇಶ್, ಮೋಹನ್‍ಕುಮಾರ್, ಸಿದ್ದೇಶ್ ಅವರುಗಳು ಅಧಿಕಾರ ಸ್ವೀಕರಿಸಿದರು.