ಗೋಣಿಕೊಪ್ಪ ವರದಿ, ಆ. 2 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ಹಕ್ಕು ಕಾಯ್ದೆ ಘಟಕದ ಅಧ್ಯಕ್ಷರಾಗಿ ನೇಮಕ ಗೊಂಡು ಜಿಲ್ಲೆಗೆ ಆಗಮಿಸಿದ ಹಿರಿಯ ವಕೀಲ ಎ. ಎಸ್. ಪೆÇನ್ನಣ್ಣ ಅವರನ್ನು ಆನೆಚೌಕೂರು ಗೇಟ್‍ನಲ್ಲಿ ಹೂಗುಚ್ಚ ನೀಡಿ, ಸ್ವಾಗತಿಸಿಕೊಳ್ಳಲಾಯಿತು.

ಈ ಸಂದರ್ಭ ಪಕ್ಷದ ಪ್ರಮುಖರಾದ ಕೊಲ್ಲೀರ ಬೋಪಣ್ಣ, ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ, ಕಡೇಮಾಡ ಕುಸುಮ ಜೋಯಪ್ಪ, ತೀತಮಾಡ ಸದನ್, ಚೇರಂಡ ಮೋಹನ್ ಕುಶಾಲಪ್ಪ, ಚಂದುರ ರೋಹಿತ್, ಕೇಚಮಾಡ ಶಿವು ಇದ್ದರು.