ಮಡಿಕೇರಿ, ಆ. 2: ದೇಶದಲ್ಲಿ ಪರಿಸರದ ಉಳಿವಿನೊಂದಿಗೆ ಮರಹನನ ತಡೆಗಟ್ಟುವ ಸದುದ್ದೇಶ ದಿಂದ ಮತ್ತು ಗೃಹಿಣಿಯರು ಹೊಗೆಮುಕ್ತ ಬದುಕು ರೂಪಿಸಿ ಕೊಳ್ಳಬೇಕೆಂಬ ದಿಸೆಯಲ್ಲಿ ಕೇಂದ್ರ, ರಾಜ್ಯ ಸರಕಾರಗಳು ರೂಪಿಸಿರುವ ಅಡುಗೆ ಅನಿಲ ಯೋಜನೆಯಲ್ಲಿ ಭಾರೀ ಅವ್ಯವಹಾರದ ಆರೋಪ ಕೇಳಿ ಬರತೊಡಗಿದೆ. ಇಂತಹ ಹಗರಣದಲ್ಲಿ ಮುಖ್ಯವಾಗಿ ಅರಣ್ಯ ಇಲಾಖೆ, ಅಡುಗೆ ಅನಿಲ ವಿತರಕರು ಹಾಗೂ ಗ್ರಾ.ಪಂ. ಹಂತದ ಅಧಿಕಾರಿಗಳು ಕೂಡ ಶಾಮೀಲಾಗಿ ರುವ ಗಂಭೀರ ಆರೋಪವಿದೆ.ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ವನಸಂಪತ್ತು ಸಂರಕ್ಷಣೆಗಾಗಿ ಉಚಿತ ಅಡುಗೆ ಅನಿಲ ಪೂರೈಕೆ ಯೋಜನೆ ಜಾರಿಗೊಂಡು ವರ್ಷಗಳು ಉರುಳಿವೆ. ಕಾಡಂಚಿನಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನತೆಗಾಗಿ ಉಚಿತ ಅಡುಗೆ ಅನಿಲವನ್ನು ಪೂರೈಕೆ ಮಡಿಕೇರಿ, ಆ. 2: ದೇಶದಲ್ಲಿ ಪರಿಸರದ ಉಳಿವಿನೊಂದಿಗೆ ಮರಹನನ ತಡೆಗಟ್ಟುವ ಸದುದ್ದೇಶ ದಿಂದ ಮತ್ತು ಗೃಹಿಣಿಯರು ಹೊಗೆಮುಕ್ತ ಬದುಕು ರೂಪಿಸಿ ಕೊಳ್ಳಬೇಕೆಂಬ ದಿಸೆಯಲ್ಲಿ ಕೇಂದ್ರ, ರಾಜ್ಯ ಸರಕಾರಗಳು ರೂಪಿಸಿರುವ ಅಡುಗೆ ಅನಿಲ ಯೋಜನೆಯಲ್ಲಿ ಭಾರೀ ಅವ್ಯವಹಾರದ ಆರೋಪ ಕೇಳಿ ಬರತೊಡಗಿದೆ. ಇಂತಹ ಹಗರಣದಲ್ಲಿ ಮುಖ್ಯವಾಗಿ ಅರಣ್ಯ ಇಲಾಖೆ, ಅಡುಗೆ ಅನಿಲ ವಿತರಕರು ಹಾಗೂ ಗ್ರಾ.ಪಂ. ಹಂತದ ಅಧಿಕಾರಿಗಳು ಕೂಡ ಶಾಮೀಲಾಗಿ ರುವ ಗಂಭೀರ ಆರೋಪವಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ವನಸಂಪತ್ತು ಸಂರಕ್ಷಣೆಗಾಗಿ ಉಚಿತ ಅಡುಗೆ ಅನಿಲ ಪೂರೈಕೆ ಯೋಜನೆ ಜಾರಿಗೊಂಡು ವರ್ಷಗಳು ಉರುಳಿವೆ. ಕಾಡಂಚಿನಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನತೆಗಾಗಿ ಉಚಿತ ಅಡುಗೆ ಅನಿಲವನ್ನು ಪೂರೈಕೆ ಅರಣ್ಯದಂಚಿನ ನಿವಾಸಿಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಮತ್ತು ರೀಫಿಲ್ಲಿಂಗ್ ಸಲುವಾಗಿ ಏಜೆನ್ಸಿಯೊಂದಕ್ಕೆ ರೂ. 31.60 ಲಕ್ಷ ಹಣ ಪಾವತಿಸಿರುವುದು ಖಾತರಿಯಾಗಿದೆ.
ಅಲ್ಲದೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಶೀರ್ಷಿಕೆಯಲ್ಲಿ ರೀಫಿಲ್ ಮಾಡಲು ಮತ್ತೆ ರೂ. 2,24,250 ಮೊತ್ತವನ್ನು ಸಂಬಂಧಿಸಿದ ಏಜೆನ್ಸಿಗೆ ಸಂದಾಯ ಮಾಡಲಾಗಿದೆ. ಈ ಎರಡು ಕಂತಿನ ಮೊತ್ತವನ್ನು 2019ರ ಮಾರ್ಚ್ 22 ಹಾಗೂ 25 ರಂದು ಕೇವಲ ಮೂರು ದಿನಗಳಲ್ಲಿ ಚೆಕ್ ಮುಖಾಂತರ ವೀರಾಜಪೇಟೆಯ ಗ್ಯಾಸ್ ಏಜೆನ್ಸಿಗೆ ಪಾವತಿ ಮಾಡಲಾಗಿದೆ ಎಂದು ಮಡಿಕೇರಿ ಉಪವಿಭಾಗದ ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದರೆ ದಕ್ಷಿಣ ಕೊಡಗಿನ ಅರ್ಹ ಫಲಾನುಭವಿಗಳಿಗೆ ಮಾತ್ರ ಇನ್ನೂ ಅಡುಗೆ ಅನಿಲ ಪೂರೈಸಿಲ್ಲ. ಅಲ್ಲಿ ಸಮೀಕ್ಷೆ ಮಾತ್ರ ನಡೆಸಲಾಗುತ್ತಿದೆ. ಹಾಗಿದ್ದಲ್ಲಿ ಅಲ್ಲಿನ ಅನಿಲ ವಿತರಕರಿಗೆ ಪಾವತಿಸಲಾದ ಹಣಕ್ಕೆ ಫಲಾನುಭವಿಗಳು ಯಾರು ಎಂಬ ಸಂಶಯ ಮೂಡುತ್ತಿದೆ.
ಫಲಾನುಭವಿಗಳು: ಅರಣ್ಯ ಇಲಾಖೆಯಿಂದ ಕಾಡನ್ನು ಉಳಿಸಿ, ಸೌದೆ ಬದಲಿಗೆ ಅಡುಗೆ ಅನಿಲದಿಂದ ಅರಣ್ಯದ ಅಂಚಿನ ನಿವಾಸಿಗಳು ಪ್ರಯೋಜನ ಪಡೆದಿರುವ ಪಟ್ಟಿಯನ್ನು ಗಮನಿಸಿದಾಗ ಇನ್ನಷ್ಟು ಸಂಶಯ ದೊಂದಿಗೆ ಇಲಾಖೆಯ ಅವ್ಯವಹಾರಕ್ಕೆ ನಿದರ್ಶನ ಗೋಚರಿಸಲಿದೆ. ಆ ಪ್ರಕಾರ ಸೋಮವಾರಪೇಟೆ ತಾಲೂಕಿನ ಹಳೆಗೋಟೆ, ಕಾಜೂರು, ಐಗೂರು, ಬೆಟ್ಟದಳ್ಳಿ, ಕುಸುಬೂರು ಹಾಗೂ ಶಾಂತಳ್ಳಿ ವ್ಯಾಪ್ತಿಯ ಕುಗ್ರಾಮಗಳ ಪಟ್ಟಿ ಲಭಿಸುತ್ತದೆ.
ಮುಂದುವರಿದು ಯಲಕನೂರು, ಯಡವನಾಡು, ಅರೆಯೂರು, ಸೀಗೆ ಹೊಸೂರು, ಕೊಡಗರಹಳ್ಳಿ, ನಂಜರಾಯಪಟ್ಟಣ ಸೇರಿದಂತೆ ಮಡಿಕೇರಿ ತಾಲೂಕಿನ ಭಾಗಮಂಡಲ, ಸಂಪಾಜೆ ಹೋಬಳಿಗಳ ಫಲಾನುಭವಿಗಳನ್ನು ಹೆಸರಿಸಲಾಗಿದೆ. ಅಂತೆಯೇ ಗಾಳಿಬೀಡು, ಹೊದ್ದೂರು, ಮದೆ, ಮಕ್ಕಂದೂರು ಇನ್ನಿತರೆಡೆಗಳಲ್ಲಿನ ನಿವಾಸಿಗಳಿಗೆ ಅನಿಲ ಪೂರೈಸ ಲಾಗಿದೆ ಎಂಬ ವಿವರ ಲಭಿಸಿದೆ.
ಮಾತ್ರವಲ್ಲದೆ ಶನಿವಾರಸಂತೆ ಹೋಬಳಿಯಲ್ಲಿ ಕೊಡಗಿನ ಗಡಿ ಗ್ರಾಮಗಳ ನೂರಾರು ಶೋಷಿತ ಕುಟುಂಬಗಳಿಗೆ ಉಚಿತ ಅನಿಲ ಪೂರೈಸಲಾಗಿದೆ ಎಂದು ಪಟ್ಟಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಮೂದಿಸಿದ್ದಾರೆ. ಈ ಪಟ್ಟಿಯನ್ನು ಗಮನಿಸಿದರೆ
(ಮೊದಲ ಪುಟದಿಂದ) ಆಯಾ ಗ್ರಾಮನಿವಾಸಿಗಳ ಪ್ರಕಾರ ಬಹುತೇಕ ನಕಲಿ ಹೆಸರುಗಳನ್ನು ನಮೂದಿಸಿರುವ ಗಂಭೀರ ಆರೋಪವಿದ್ದು, ನೈಜವಾಗಿ ವಾಸವಿರುವ ಬಹುತೇಕ ಮಂದಿಗೆ ಇಂತಹ ಪ್ರಯೋಜನ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಹಾರಿಕೆಯ ಉತ್ತರ: ಇನ್ನು ಕೊಡಗಿನ ಮಟ್ಟಿಗೆ ಆದಿವಾಸಿಗಳು ದಕ್ಷಿಣ ಕೊಡಗಿನ ವೀರಾಜಪೇಟೆ ತಾಲೂಕಿನ ಹಾಡಿಗಳಲ್ಲಿ ಇದ್ದಾರೆ. ಹೀಗಿರುವಾಗ ವೀರಾಜಪೇಟೆಯ ಅನಿಲ ವಿತರಕರ ಮೂಲಕ ಉತ್ತರ ಕೊಡಗಿನ ಗಡಿ ಅಂಚಿನ ಮಂದಿಗೆ ಅನಿಲ ಪೂರೈಕೆ ಯಾಕೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಇಲಾಖೆಯ ಮಂದಿ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಸಂಶಯಕ್ಕೆ ದಾರಿ: ಕೊಡಗು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಆದಿವಾಸಿಗಳು ದಕ್ಷಿಣ ಕೊಡಗಿನ ಸಾಕಷ್ಟು ಹಾಡಿಗಳಲ್ಲಿ ವಾಸವಿದ್ದರೂ, ಇಲಾಖೆಯ ಅಧಿಕಾರಿಗಳ ಪ್ರಕಾರ ಅಂತಹ ಕಡೆಗಳಲ್ಲಿ ಅನಿಲ ಪೂರೈಕೆ ಆಗಿಲ್ಲ; ವೀರಾಜಪೇಟೆ ತಾಲೂಕಿನಲ್ಲಿ ಪ್ರಸ್ತುತ ಸಮೀಕ್ಷೆ ಕೈಗೊಳ್ಳಲಾಗಿದೆ ಎಂಬ ಮಾಹಿತಿಯಿದ್ದು, ಸುಮಾರು ಎಂಟುನೂರಕ್ಕೂ ಅಧಿಕ ಕುಟುಂಬಗಳಿಗೆ ಈಗಾಗಲೇ ಪೂರೈಕೆಯಾಗಿರುವ ಅಡುಗೆ ಅನಿಲದಲ್ಲಿ ನೈಜ ಫಲಾನುಭವಿಗಳು ಎಷ್ಟು ಮಂದಿ ಎಂಬ ಸಂಶಯ ಹುಟ್ಟಿಕೊಂಡಿದೆ. ಮಾತ್ರವಲ್ಲದೆ ವೀರಾಜಪೇಟೆ ತಾಲೂಕಿನ ಹಾಡಿಗಳಿಗೆ ಉಚಿತ ಅಡುಗೆ ಅನಿಲ ಪೂರೈಕೆಗಾಗಿ ಈಗಷ್ಟೇ ಸಮೀಕ್ಷೆ ನಡೆಯುತ್ತಿದೆ ಎಂದು ನುಣುಚಿಕೊಳ್ಳುತ್ತಿದ್ದು, ಇತರೆಡೆಗಳಿಗೆ ಆದ್ಯತೆಯ ಮೇರೆಗೆ ಅರಣ್ಯ ಇಲಾಖೆಯು ಉಚಿತ ಅನಿಲ ಪೂರೈಸಿರುವುದಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ.
ಉಜ್ವಲ ಪಟ್ಟಿ?: ಇನ್ನೊಂದು ಮೂಲದ ಪ್ರಕಾರ ಕೇಂದ್ರ ಸರಕಾರದಿಂದ ಉಜ್ವಲ ಅನಿಲ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಉಚಿತವಾಗಿ ಪೂರೈಸಲು ಕ್ರಮಕೈಗೊಂಡಿದ್ದು, ಪ್ರಧಾನಮಂತ್ರಿ
ಉಜ್ವಲ ಅನಿಲ ಯೋಜನೆಯ ವಾಸ್ತವ ಮರೆಮಾಚಿ, ಈ ರೀತಿ ದಂಧೆಯೊಂದಿಗೆ ಅಡುಗೆ ಅನಿಲ ಸರಬರಾಜಿನಲ್ಲಿ ಭಾರೀ ದುರುಪಯೋಗ ಅಥವಾ ಅವ್ಯವಹಾರ ನಡೆಯುತ್ತಿದೆ ಎಂಬ ಅಸಮಾಧಾನ ಕೇಳಿ ಬರತೊಡಗಿದೆ. ಈ ದಿಸೆಯಲ್ಲಿ ಸೂಕ್ತ ತನಿಖೆ ನಡೆಸುವ ಮೂಲಕ ಅರಣ್ಯ ಇಲಾಖೆಯೊಂದಿಗೆ ಇತರರ ಅಕ್ರಮ ದಂಧೆಗೆ ಅಂಕುಶ ಹಾಕಬೇಕಿದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮೌನ ಮುರಿದು ಕಾನೂನು ಕ್ರಮಕ್ಕೆ ಕಾಳಜಿ ತೋರಬೇಕಿದೆ.