ಮಡಿಕೇರಿ, ಆ. 1: ಜಿಲ್ಲೆಯಲ್ಲಿ ಹೊಸದಾಗಿ 11 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 460 ಪ್ರಕರಣಗಳು ಪತ್ತೆಯಾಗಿದ್ದು, 313 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 9 ಮಂದಿ ಸಾವನ್ನಪ್ಪಿದ್ದು, 138 ಪ್ರಕರಣಗಳು ಸಕ್ರಿಯವಾಗಿವೆ.ಹೊಸ ಪ್ರಕರಣಗಳ ವಿವರ ವೀರಾಜಪೇಟೆಯ ಗಾಯತ್ರಿ ಭವನ ಹಿಂಭಾಗದ 52 ವರ್ಷದ ಪುರುಷ, ಮಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಮಡಿಕೇರಿ ಅಶೋಕಪುರ ಸಮೀಪದ 28 ವರ್ಷದ ಪುರುಷ, ಶನಿವಾರಸಂತೆಯ ಮುಖ್ಯರಸ್ತೆಯ 31 ವರ್ಷದ ಮಹಿಳೆ, ಹೆಬ್ಬಾಲೆಯ ಕಾಳಿಕಾಂಬ ದೇವಾಲಯ ಬಳಿಯ 42 ವರ್ಷದ ಪುರುಷ, ಸುಂಟಿಕೊಪ್ಪ ಮಟನ್ ಮಾರುಕಟ್ಟೆಯ 53 ವರ್ಷದ ಪುರುಷ, ಮಡಿಕೇರಿ ಮಹದೇವಪೇಟೆಯ 51 ವರ್ಷದ ಮಹಿಳೆ, (ಮೊದಲ ಪುಟದಿಂದ) ಗೋಣಿಕೊಪ್ಪಲಿನ ಈರಣ್ಣ ಕಾಲೋನಿಯ 13 ವರ್ಷದ ಬಾಲಕಿ, ಮಡಿಕೇರಿ ತ್ಯಾಗರಾಜ ಕಾಲೋನಿಯ 45 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಚೈನ್ಗೇಟ್ ಬಳಿಯ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ 40 ವರ್ಷದ ಪುರುಷ, ಅಂತರ್ರಾಷ್ಟ್ರೀಯ ಪ್ರಯಾಣದ ಇತಿಹಾಸವಿರುವ ಹಾಕತ್ತೂರಿನ 31 ವರ್ಷದ ಪುರುಷ, ಮಡಿಕೇರಿಯ ಮಹದೇವಪೇಟೆಯ ಚೌಡೇಶ್ವರಿ ದೇವಾಲಯ ಸಮೀಪದ 49 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಹೊಸ ನಿಯಂತ್ರಿತ ಪ್ರದೇಶಗಳು
ವೀರಾಜಪೇಟೆಯ ಗಾಯತ್ರಿ ಭವನದ ಹಿಂಭಾಗ, ಮಡಿಕೇರಿಯ ಕೊಡಗು ವಿದ್ಯಾಲಯದ ಸಮೀಪ, ಶನಿವಾರಸಂತೆ ಮುಖ್ಯ ರಸ್ತೆಯ ಸಮೀಪ, ಹೆಬ್ಬಾಲೆಯ ಕಾಳಿಕಾಂಬ ದೇವಾಲಯದ ಸಮೀಪ, ಸುಂಟಿಕೊಪ್ಪ ಮಟನ್ ಮಾರುಕಟ್ಟೆಯ ಸಮೀಪ, ಮಡಿಕೇರಿಯ ಲೊಕೋಪಯೋಗಿ ಇಲಾಖೆಯ ವಸತಿಗೃಹಗಳಲ್ಲಿ ನಿಯಂತ್ರಿತ ಪ್ರದೇಶಗಳನ್ನು ತೆರೆಯಲಾಗಿದೆ.
ನಿಯಂತ್ರಿತ ಪ್ರದೇಶಗಳ ತೆರವು
ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆ, ಹರಿಶ್ಚಂದ್ರಪುರ, ಸೋಮವಾರಪೇಟೆಯ ಕಕ್ಕೆಹೊಳೆ, ಕುಶಾಲನಗರದ ಬಲಮುರಿ ದೇವಾಲಯದ ಬಳಿ, ಮಡಿಕೇರಿ ಟಿ.ಜಾನ್ ಲೇಔಟ್, ತಾಳತ್ತಮನೆ, ತೊರೆನೂರಿನಲ್ಲಿದ್ದ ನಿಯಂತ್ರಿತ ಪ್ರದೇಶಗಳನ್ನು ತೆರೆದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.