ವೀರಾಜಪೇಟೆ, ಆ. 1: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಎಂಟನೇ ವಾರ್ಡ್‍ನ ಸುಮಾರು 50ಕ್ಕೂ ಅಧಿಕ ಮನೆಗಳಿರುವ ವಿದ್ಯಾನಗರದ ಮನೆಗಳಿಗೆ ಸ್ವಯಂ ಪ್ರೇರಣೆಯಿಂದ ಸ್ಯಾನಿಟೈಸರ್ ಸಿಂಪಡಿಸಿ ಶುಚಿಗೊಳಿಸಲಾಯಿತು. ಎಂಟನೇ ವಾರ್ಡ್‍ನ ಪ್ರಮುಖರಾದ ಯೋಗೀಶ್ ನಾಯ್ಡು ನೇತೃತ್ವದಲ್ಲಿ ಅಂಜನ್, ಮೊಣ್ಣಪ್ಪ, ಮನೋಜ್, ಅನಿಲ್, ಕೆ.ಎನ್. ಸೂಫಿ, ನೌಶಾದ್ ಹಾಗೂ ಇಸ್ಮಾಯಿಲ್ ಶುಚಿತ್ವದಲ್ಲಿ ಭಾಗಿಯಾಗಿದ್ದರು.