ಶನಿವಾರಸಂತೆ, ಆ. 1: ಶನಿವಾರಸಂತೆ ಪಂಚಾಯಿತಿ ಮಧ್ಯಪೇಟೆಯಲ್ಲಿ ಮಹಿಳೆಯೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವುದರಿಂದ ಆಕೆಯ ಮನೆಯ ವ್ಯಾಪ್ತಿಯಲ್ಲಿ ಸೀಲ್‍ಡೌನ್ ಮಾಡಲಾಯಿತು.

ಸ್ಥಳದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್, ಕಂದಾಯ ಇಲಾಖೆಯ ಹೂವಯ್ಯ, ಮಂಜೇಶ್, ಆರೋಗ್ಯ ಇಲಾಖೆಯ ಸರಸ್ವತಿ ಹಾಗೂ ಆಶಾ ಕಾರ್ಯಕರ್ತೆ ಲಕ್ಷ್ಮಿ ಹಾಜರಿದ್ದರು. ಗ್ರಾ.ಪಂ. ವತಿಯಿಂದ ಸೋಂಕಿತೆಯ ಮನೆಯ ಸುತ್ತಮುತ್ತ ಔಷಧ ಸಿಂಪಡಿಸಲಾಯಿತು.