ಕೂಡಿಗೆ, ಆ. 1: ಕೂಡಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕೂಡಿಗೆ ಸರ್ಕಲ್‍ನಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರದ ಒಂದು ವರ್ಷದ ಸಾಧನೆಯ ಕರಪತ್ರಗಳನ್ನು ಮನೆ ಮನೆಗೆ ಹಂಚಿದರು.

ಬಸವನತ್ತೂರು ಗ್ರಾಮದ ಬಿ.ಜೆ.ಪಿ. ಬೂತ್ ಸಮಿತಿ ಅಧ್ಯಕ್ಷ ಆರ್. ಕೃಷ್ಣ, ಪಕ್ಷದ ಹಿರಿಯ ಕಾರ್ಯಕರ್ತ ಸುಬ್ಬಯ್ಯಣ್ಣ, ಧರ್ಮಣ್ಣ, ಲೋಕೇಶ್, ಕೇಶವ ರೈ, ಮಂಜುನಾಥ ಸೇರಿದಂತೆ ಹಲವರು ಹಾಜರಿದ್ದರು.