ಮಡಿಕೇರಿ, ಜು. 31: ‘ಮಿಷನ್ ಕ್ಲೀನ್ ಕುಂಜಿಲ’ ಎಂಬ ಯುವಕರ ಬಳಗದಿಂದ ಗ್ರಾಮದ ಮಸೀದಿ, ಮದರಸ, ಶಾಲೆಗಳ ಪರಿಸರವನ್ನು ಶುಚಿತ್ವಗೊಳಿಸುವ ಕಾರ್ಯ ನಡೆಯಿತು.

ಕಾರ್ಯಕ್ರಮದಲ್ಲಿ ಯೂಥ್ ವಿಂಗ್ ಅಧ್ಯಕ್ಷ ಆಶಿಕ್, ಕಾರ್ಯದರ್ಶಿ ನೌಫಲ್, ಖಜಾಂಚಿ ಫಾರೂಕ್, ಮೀಡಿಯಾ ಕನ್ವರ್ಟರ್ ಜೌಹರ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.