ಮಡಿಕೇರಿ, ಜು. 31: ಕೊಡಗು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ವಯೋ ನಿವೃತ್ತರಾದ ಶಿವಲಿಂಗ ಶೆಟ್ಟಿ ಅವರನ್ನು ಕೊಡಗು ಜಿಲ್ಲೆಯ ಉಪನ್ಯಾಸಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇವರ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಪ್ರಬಾರ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುವ ಸಿಎಂ ಮಹಾಲಿಂಗಯ್ಯ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪಿಲಿಪ್ ವಾಸ್ ಪ್ರಧಾನ ಕಾರ್ಯದರ್ಶಿ ಹಂಡ್ರಂಗಿ ನಾಗರಾಜ್, ಉಪನ್ಯಾಸಕರಾದ ದಿವಾಕರ್, ಸುರೇಂದ್ರ ಕುಮಾರ್ ಉಪಸ್ಥರಿದ್ದರು.