ಸುಂಟಿಕೊಪ್ಪ, ಆ. 1: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಅವರು ನಿವೃತ್ತಿಗೊಂಡ ಠಾಣಾಧಿಕಾರಿ ಬಿ. ತಿಮ್ಮಪ್ಪ ಅವರಿಗೆ ಸನ್ಮಾನಿಸಿ, ಗೌರವಿಸಿದರು.
ಕಳೆದ 10 ತಿಂಗಳಿನಿಂದ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ಬಿ. ತಿಮ್ಮಪ್ಪ ವಯೋನಿವೃತ್ತಿ ಹೊಂದುತ್ತಿದ್ದಾರೆ ಎಂದರು. ನಿವೃತ್ತಿ ಜೀವನವು ಸುಖಮಾಯವಾಗಿರಲಿ ಎಂದು ಹಾರೈಸಿದರು. ಈ ಸಂದರ್ಭ ಪಂಚಾಯಿತಿ ಸಿಬ್ಬಂದಿಗಳಾದ ಪುನೀತ್‍ಕುಮಾರ್, ಶ್ರೀನಿವಾಸ್, ಎ.ಎಸ್.ಐ. ಕಾವೇರಪ್ಪ, ಶಿವಪ್ಪ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.