ಸಿದ್ದಾಪುರ, ಆ. 1: ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಮರಗಳ ದಿಮ್ಮಿ ಗಳನ್ನು ಸಾಗಾಟ ಮಾಡುತ್ತಿದ್ದ ಮಿನಿ ಲಾರಿಯನ್ನು ಸಿದ್ದಾಪುರದ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿಗಳು ಪತ್ತೆಹಚ್ಚಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಮಳೆಗಾಲದ ಸಂದರ್ಭದಲ್ಲಿ ಭಾರಿ ತೂಕದ ವಾಹನಗಳು ರಸ್ತೆಗಳಲ್ಲಿ ಮರಗಳನ್ನು ಸಾಗಾಟ ಮಾಡಬಾರದೆಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು ಆದರೆ ಇತ್ತೀಚೆಗೆ ಕೆಲವು ಲಾರಿಗಳು ಅಕ್ರಮವಾಗಿ ಮರಗಳ ನಾಟ ಗಳನ್ನು ಹಾಗೂ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಲವಾರು ವಾಹನಗಳನ್ನು ಸಿದ್ದಾಪುರದ ಠಾಣಾಧಿಕಾರಿ ಮೋಹನ್ ರಾಜ್ ಪತ್ತೆಹಚ್ಚಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ ಸಾರಿಗೆ ಇಲಾಖೆ ವತಿಯಿಂದ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ ಇದೀಗ ಪೆÇಲೀಸರು ಮುಟ್ಟುಗೋಲು ಹಾಕಿಕೊಂಡಿರುವ ಮಿನಿ ಲಾರಿಯನ್ನು ಪ್ರಾದೇಶಿಕ ಸಾರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ.