ಸೋಮವಾರಪೇಟೆ, ಜು. 31: ಸಮೀಪದ ಐಗೂರು ಗ್ರಾಮಕ್ಕೆ ಬಂದೋಬಸ್ತ್ ಸೇವೆಗೆ ಆಗಮಿಸಿದ್ದ ಪೆÇಲೀಸ್ ಪೇದೆಯೋರ್ವರಿಗೆ ಇಂದು ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಐಗೂರಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಐಗೂರು ಡಿಬಿಡಿ ಎಸ್ಟೇಟ್‍ನಲ್ಲಿ ಗೋವುಗಳ ಕಳೇಬರ ಕಂಡುಬಂದ ನಂತರ ಸ್ಥಳೀಯರು ಮತ್ತು ಎಸ್ಟೇಟ್‍ನ ಸಿಬ್ಬಂದಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಈ ಮಧ್ಯೆ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಐಗೂರಿನಲ್ಲಿ ಆತಂಕದ ವಾತಾವರಣವಿತ್ತು.

ಈ ಹಿನ್ನೆಲೆ ಜಿಲ್ಲಾ ಮೀಸಲು ಪಡೆಯ ತುಕಡಿಯನ್ನು ನಿಯೋಜಿಸಲಾಗಿತ್ತು. ಈ ಮೊದಲು ಬಂದಿದ್ದ ಒಂದು ತುಕಡಿ ನಿನ್ನೆ ದಿನ ಮಡಿಕೇರಿಗೆ ವಾಪಸ್ ಆಗಿದೆ. ಮತ್ತೊಂದು ತುಕಡಿಯಲ್ಲಿ 6 ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ನಿನ್ನೆಯಷ್ಟೇ ಐಗೂರಿಗೆ ಬಂದಿದ್ದ ಪೆÇಲೀಸ್ ಪೇದೆಗೆ ಇಂದು ಕೋವಿಡ್ ದೃಢಪಟ್ಟಿದ್ದು, ಅಪರಾಹ್ನದ ವೇಳೆಗೆ ಆಂಬ್ಯುಲೆನ್ಸ್‍ನಲ್ಲಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನಿನ್ನೆ ಐಗೂರಿಗೆ ಆಗಮಿಸಿದ್ದ ಈ 6 ಮಂದಿ ಪೆÇಲೀಸರು ಐಗೂರು ವ್ಯಾಪ್ತಿಯ ಅಂಗಡಿ, ಹೊಟೇಲ್‍ಗಳಿಗೆ ತೆರಳಿದ್ದು, ರಾತ್ರಿ ವೇಳೆ ವಿ.ಎಸ್.ಎಸ್.ಎನ್. ಕಟ್ಟಡದಲ್ಲಿ ತಂಗಿದ್ದಾರೆ. ಅದೇ ಕಟ್ಟಡದಲ್ಲಿ ಇಂದು ಸಹಕಾರ ಸಂಘದ ಆಡಳಿತ ಮಂಡಳಿ ಸಭೆಯೂ ನಡೆದಿದ್ದು, ಪದಾಧಿಕಾರಿಗಳು ಭಾಗವಹಿಸಿದ್ದಾರೆ. ಸಭೆ ಮಧ್ಯಾಹ್ನದ ವೇಳೆಗೆ ಮುಕ್ತಾಯಗೊಂಡಿದ್ದು, ಇದೇ ಸಮಯದಲ್ಲಿ ಪೆÇಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೂ ಪೆÇಲೀಸರು ಐಗೂರಿನಲ್ಲಿಯೇ ಇದ್ದುದರಿಂದಾಗಿ ಈ ವ್ಯಾಪ್ತಿಯ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.