ಸೋಮವಾರಪೇಟೆ, ಆ. 1: ದಾವಣಗೆರೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಜಿಲ್ಲೆಯ ಸ್ವಾಮೀಜಿಯೋರ್ವರು ಯಾವದೇ ಅಪಾಯವಿಲ್ಲದೇ ಪಾರಾಗಿದ್ದಾರೆ.

ತಾಲೂಕಿನ ಶನಿವಾರಸಂತೆ ಸಮೀಪದ ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಚಾಲಿಸುತ್ತಿದ್ದ ಕಾರು, ದಾವಣಗೆರೆಯ ಹೆಬ್ಬಾಳ ಸಮೀಪದ ಅಕ್ಕಿಆಲೂರು ಎಂಬಲ್ಲಿ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿನ ಗದ್ದೆಗೆ ಮಗುಚಿಕೊಂಡಿದೆ.

ಘಟನೆಯಿಂದ ಕಾರು ಭಾಗಶಃ ಜಖಂಗೊಂಡಿದ್ದು, ಕಾರಿನೊಳಗಿದ್ದ ಸ್ವಾಮೀಜಿ ಹಾಗೂ ಅವರ ಸಹೋದರ ಯಾವದೇ ಅಪಾಯವಿಲ್ಲದೇ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ. ಕಾರಿನ ಸೀಟ್ ಬೆಲ್ಟ್ ಹಾಕಿದ್ದರಿಂದ ಯಾವದೇ ರೀತಿಯ ತೊಂದರೆಯಾಗಿಲ್ಲ ಎಂದು ಸ್ವಾಮೀಜಿಯ ಆಪ್ತರು ತಿಳಿಸಿದ್ದಾರೆ.