ಪಾಲಿಬೆಟ್ಟ, ಆ. 1: ಕೊಡಗು ಚಾರಿಟೇಬಲ್ ಗ್ರೂಪ್ ಸಂಘಟನೆಯ ಯುವಕರು ಗ್ರಾಮದ ದೇವಸ್ಥಾನದ ಅರ್ಚಕರು ಹಾಗೂ ಮದರಸಾ ಅಧ್ಯಾಪಕರುಗಳಿಗೆ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಮೂಲಕ ಕೊಡಗು ಚ್ಯಾರಿಟೇಬಲ್ ವಾಟ್ಸಪ್ ಗ್ರೂಪ್ ದಾನಿಗಳ ಸಹಕಾರದಿಂದ 300ಕ್ಕೂ ಹೆಚ್ಚು ತರಕಾರಿ ಕಿಟ್‍ಗಳನ್ನು ಬಕ್ರೀದ್ ಹಬ್ಬದ ಪ್ರಯುಕ್ತ ದೇವಸ್ಥಾನದ ಅರ್ಚಕರು ಹಾಗೂ ಮದರಸಾ ಅಧ್ಯಾಪಕರುಗಳಿಗೆ ವಿತರಿಸಿ ಜಾತಿ, ಮತ, ಭೇದವಿಲ್ಲದೆ ಸೌಹಾರ್ದತೆ ಮೆರೆದಿದ್ದಾರೆ.

ಈ ಸಂದರ್ಭ ಕೊಡಗು ಚ್ಯಾರಿಟೇಬಲ್ ಗ್ರೂಪ್‍ನ ಎಂ.ಎ. ಜಾಫರ್, ಗ್ರಾ.ಪಂ. ಸದಸ್ಯ ವಿಜು, ರದೀಶ್, ಮಂಜುನಾಥ್ ಭಟ್, ಹೆಚ್.ಎ. ಮುಸ್ತಫಾ, ನೌಫಲ್, ನಜೀರ್ ಸೇರಿದಂತೆ ಮತ್ತಿತರರು ಇದ್ದರು.