ನಾಪೆÇೀಕ್ಲು, ಜು. 30 : ಕೊರೊನಾದಿಂದ ಎಮ್ಮೆಮಾಡಿನ 52 ವರ್ಷದ ವ್ಯಕ್ತಿಯೊಬ್ಬರಿಗೆ ಸೊಂಕು ದೃಢಪಟ್ಟಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯವರು ಸೋಂಕಿತ ವ್ಯಕ್ತಿ ವಾಸವಾಗಿದ್ದ ಎಮ್ಮೆಮಾಡಿನ ಮನೆಯನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಸೀಲ್‍ಡೌನ್ ಮಾಡಿದ್ದಾರೆ.

ಸೋಂಕಿತ ವ್ಯಕ್ತಿ ನಾಪೆÇೀಕ್ಲು ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ಪಡೆದಿದ್ದು ನಾಪೆÇೀಕ್ಲು ಸಮುದಾಯ ಆಸ್ಪತ್ರೆಯನ್ನು ಸ್ಯಾನಿಟೈಸರ್ ಮಾಡಲಾಗಿದೆ. ನಾಪೆÇೀಕ್ಲು ಮತ್ತು ಎಮ್ಮೆಮಾಡು ವಿಭಾಗದಲ್ಲಿ ರೋಗದ ಲಕ್ಷಣ ಹರಡುತ್ತಿದ್ದು ಪ್ರತಿಯೊಬ್ಬರು ಜಾಗರೂಕತೆಯಿಂದ ಇರಬೇಕೆಂದು ಸ್ಥಳೀಯ ಗ್ರಾಮ ಪಂಚಾಯಿತಿ ಸಾರ್ವಜನಿಕರನ್ನು ವಿನಂತಿಸಿದೆ. ಈ ಸಂದರ್ಭ ಕಂದಾಯ ಇಲಾಖೆಯ ಉಪತಹಶೀಲ್ದಾರ್ ಸಿದ್ದರಾಜು, ಪರಿವೀಕ್ಷಕ ಶಿವಕುಮಾರ್, ಕಂದಾಯ ಇಲಾಖೆಯ ಸಿಬ್ಬಂದಿ ತಿಮ್ಮಣ್ಣ, ಸೋಮಣ್ಣ ಮತ್ತಿತರರು ಇದ್ದರು.