ಸಿದ್ದಾಪುರ, ಜು. 30: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಎಂ.ಜಿ ಕಾಲೋನಿಯಲ್ಲಿ ಯುವಕನೋರ್ವನಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆತನ ನಿವಾಸದ ಸಮೀಪ ಸೀಲ್‍ಡೌನ್ ಮಾಡಲಾಗಿದೆ. ಈ ಸಂದರ್ಭ ನೋಡಲ್ ಅಧಿಕಾರಿ ವರದರಾಜು, ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗ ಸಂತೋಷ್, ಪಿ.ಡಿ.ಒ. ಅನಿಲ್‍ಕುಮಾರ್, ಗ್ರಾ.ಪಂ. ಮಾಜಿ ಸದಸ್ಯರುಗಳಾದ ಶುಕೂರ್, ಮುಸ್ತಫಾ, ಸ್ವಯಂ ಸೇವಕರಾದ ಶರೀಫ್ ಹಾಗೂ ಸಲಾಂ ಹಾಜರಿದ್ದರು.ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಎಂ.ಜಿ. ರಸ್ತೆಯಲ್ಲಿ ಮಹಿಳೆಯ ಓರ್ವರಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮಹಿಳೆ ವಾಸ ಮಾಡಿಕೊಂಡಿದ್ದ ಮನೆಯ ಸಮೀಪದಲ್ಲಿ ಸೀಲ್‍ಡೌನ್ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಮಾಜಿ ಗ್ರಾ.ಪಂ. ಸದಸ್ಯ ಶೌಕತ್ ಆಲಿ, ಪ್ರೇಮ ಹಾಜರಿದ್ದರು.