ಮಡಿಕೇರಿ, ಜು. 29: ಪ್ರಸ್ತತ ಶೈಕ್ಷಣಿಕ ಸಾಲಿನ ಏಳನೇ ತರಗತಿಯ ಪಠ್ಯ ಕ್ರಮದಲ್ಲಿ, ದೇಶ ಕಂಡ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಚರಿತ್ರೆಯನ್ನು ತೆಗೆದು ಹಾಕಿರುವ ಕ್ರಮವನ್ನು ಎಸ್.ಕೆ.ಎಸ್.ಎಸ್.ಎಫ್. ವಿರೋಧ ವ್ಯಕ್ತಪಡಿಸಿದೆ.
ಟಿಪ್ಪು ಸುಲ್ತಾನ್ ದೇಶಪ್ರೇಮಿ ಯಾಗಿದ್ದು, ತನ್ನ ಮಕ್ಕಳನ್ನೇ ಬ್ರಿಟಿಷರಿಗೆ ಒತ್ತೆ ಇಟ್ಟು ಹೋರಾಡಿದ ದೇಶ ಭಕ್ತ. ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗದ ಇವರ ಕೊಡುಗೆಗಳು ಇಂದಿಗೂ ಇತಿಹಾಸ ಪುಟಗಳಲ್ಲಿ ಇದೆ. ಶತ್ರುಗಳಿಂದ ಶೃಂಗೇರಿ ಮಠದ ರಕ್ಷಣೆ ಮಾಡಿದ್ದು, ಇತಿಹಾಸಗಳಲ್ಲಿ ಇಂದಿಗೂ ಕಾಣಬಹುದಾಗಿದೆ ಎಂದಿರುವ ಪ್ರಮುಖರು ಸರಕಾರದ ಕ್ರಮವನ್ನು ವಿರೋಧಿಸಿದ್ದಾರೆ.
ರಾಜ್ಯ ಸರ್ಕಾರ ಈ ವಿವಾದಿತ ಆದೇಶ ಹಿಂಪಡೆದು, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿ, ಇತಿಹಾಸ ಉಳಿಸುವ ಕಾರ್ಯದಲ್ಲಿ ತೊಡಗಬೇಕೆಂದು ಮುಖ್ಯಸ್ಥರಾದ ತಮ್ಲೀಖ್ ದಾರಿಮಿ ಹಾಗೂ ಹುಸೇನ್ ಫೈಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.