ಕೂಡಿಗೆ, ಜು. 29: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಹಾರಂಗಿ ಗುಡ್ಡೆಹೊಸೂರು ರಸ್ತೆಯ ಬದಿಯಲ್ಲಿ ಈಗಾಗಲೇ ಬಳಕೆಯಾಗಿರುವ ಪಿ.ಪಿ.ಇ. ಕಿಟ್ ಅನ್ನು ಎಸೆಯಲಾ ಗಿದ್ದು, ಇದರಿಂದ ಈ ವ್ಯಾಪ್ತಿಯ ಜನತೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.
ಹಾರಂಗಿ ನೀರಾವರಿ ಇಲಾಖೆಯ ಪುನರ್ವಸತಿ ಕೇಂದ್ರದ. ನೌಕರರು ಬೆಳಿಗ್ಗೆ ವಾಯುವಿಹಾರಕ್ಕೆ ತೆರಳುವ ಸಂದರ್ಭ ದಾರಿಯಲ್ಲಿ ಪಿಪಿಇ ಕಿಟ್ ಕಂಡುಬಂದ ಹಿನ್ನೆಲೆ ಯಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿಯಿತ್ತರು.
ಕೂಡಲೇ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಭಾಸ್ಕರ್ ನಾಯಕ್, ಪಂಚಾಯಿತಿ ಪೌರ ಕಾರ್ಮಿಕರೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ನಂತರ ಅದೇ ಜಾಗದಲ್ಲಿ ಆ ಕಿಟ್ ಅನ್ನು ಸುಡಲಾಯಿತು.
ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಲಾಗಿದೆ. ಗ್ರಾಮಸ್ಥರು ಯಾವುದೇ ಅತಂತಪಡುವುದು ಬೇಡ ಎಂದು ನೋಡಲ್ ಅಧಿಕಾರಿ ವರದರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಹಾಗೂ ಸದಸ್ಯ ಭಾಸ್ಕರ್ ನಾಯಕ್ ಹೇಳಿದರು.