ಶನಿವಾರಸಂತೆ, ಜು. 29: ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯು ಶನಿವಾರಸಂತೆ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ನಡೆಯಿತು. ಠಾಣಾಧಿಕಾರಿ ಹೆಚ್.ಇ. ದೇವರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಕ್ರೀದ್ ಹಬ್ಬದ ಸಂದರ್ಭ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಕೋವಿಡ್-19 ನಿಯಮಗಳನ್ನು ಪಾಲಿಸುವ ಮೂಲಕ ಮುಸ್ಲಿಂ ಬಾಂಧವರು ಹಬ್ಬವನ್ನು ಆಚರಿಸಬೇಕು ಎಂದು ದೇವರಾಜ್ ಸಲಹೆಯಿತ್ತರು.

ಸಭೆಯಲ್ಲಿ ಸಹಾಯಕ ಠಾಣಾಧಿಕಾರಿಗಳಾದ ಗೋವಿಂದ್, ಶಿವಲಿಂಗ, ಹೆಡ್‍ಕಾನ್ಸ್‍ಟೇಬಲ್‍ಗಳಾದ ಬೋಪಣ್ಣ, ಲೋಕೇಶ್, ಶಶಿಕುಮಾರ್, ಜಿಲ್ಲಾ ಜನತಾ ದಳದ ಮುಖಂಡ ಎಂ.ಎ. ಆದಿಲ್ ಪಾಶ, ಜಾಮೀಯ ಮಸೀದಿ ಅಧ್ಯಕ್ಷ ಕೆ.ಎಂ. ಅಮೀದ್ ಸಾಬ್, ಮಾಜಿ ಅಧ್ಯಕ್ಷ ಅಕ್ಮಲ್ ಪಾಶ, ಮುಖಂಡರಾದ ಬಿ.ಟಿ. ರಂಗಸ್ವಾಮಿ, ಮುಸ್ತಫ, ಖಾದರ್, ಅಬ್ಬಾಸ್ ಇತರರು ಉಪಸ್ಥಿತರಿದ್ದರು.