ಮಡಿಕೇರಿ, ಜು. 29: ಮಡಿಕೇರಿ ಅರಣ್ಯ ಭವನದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರು, ಮಡಿಕೇರಿ ವಿಭಾಗ, ಮಡಿಕೇರಿಯವರ ಕಚೇರಿ ಹಾಗೂ ವಲಯ ಅರಣ್ಯಾಧಿಕಾರಿಯವರ ಕಚೇರಿ, ಮಡಿಕೇರಿ ವಲಯ, ಮಡಿಕೇರಿ ಇವರ ಕಚೇರಿಯನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಮಡಿಕೇರಿಯ ಹೊಸ ಬಡಾವಣೆಯ ಟಿವಿ-1 ಚಾನಲ್ ಕಚೇರಿ ಹತ್ತಿರ ನೂತನವಾಗಿ ನಿರ್ಮಿಸಿರುವ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಕಟಣೆಗೊಳಿಸಿದೆ.