ಮಡಿಕೇರಿ: ವಿಶ್ವ ಪರಿಸರ ಸಂರಕ್ಷಣೆ ದಿನದ ಅಂಗವಾಗಿ ಮಡಿಕೇರಿ ನಗರ ಮಹದೇವಪೇಟೆಯ ಮೂರನೇ ವಾರ್ಡಿನಲ್ಲಿರುವ ಎ.ವಿ. ಶಾಲೆಯ ಬಳಿ ಗಿಡ ನೆಡುವುದರ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.

ಈ ಸಂದರ್ಭ ಮಡಿಕೇರಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಕೇಶ್, ಮಹದೇವಪೇಟೆ ಎರಡನೇ ವಾರ್ಡಿನ ಅಧ್ಯಕ್ಷ ಬಿ.ಎಂ. ರಾಕೇಶ್, ಟೌನ್ ಬ್ಯಾಂಕ್ ನಿರ್ದೇಶಕ ಬಿ.ವಿ. ರೋಷನ್, ನಗರ ಉಪಾಧ್ಯಕ್ಷೆ ಕಲಾವತಿ, ಪ್ರೇಮರಾಘವಯ್ಯ, ಗೌರಮ್ಮ, ಜೀವನ್, ಅನಿಶ್ ಅಣ್ವೇಕರ್ ಹಾಗೂ ಎ.ವಿ. ಶಾಲೆಯ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.

ಸಿದ್ದಾಪುರ: ಚೆನ್ನಯ್ಯನಕೋಟೆ ಗ್ರಾ.ಪಂ ವತಿಯಿಂದ ಗಿಡ ನೆಡುವ ಕಾರ್ಯಕ್ರಮವು ನಡೆಯಿತು. ಗ್ರಾ.ಪಂ ವ್ಯಾಪ್ತಿಯ ವಿವಿಧ ಭಾಗಗಳಲ್ಲಿನ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಗೀತಾ, ಸದಸ್ಯರುಗಳಾದ ವಿಜು, ಕಾಡೆಮಡ ಅಪ್ಪಣ್ಣ, ಜೆ.ಕೆ. ಅಪ್ಪಾಜಿ, ಗ್ರಾಮಸ್ಥರಾದ ರತೀಶ್, ಸಬ್ಬು, ರವೀಂದ್ರ, ಬಾವೆ, ಹರೀಶ್, ರವಿ, ನೌಫಲ್ ಇನ್ನಿತರರು ಹಾಜರಿದ್ದರು.

ಕುಶಾಲನಗರ: ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆಯ ಅಂಗವಾಗಿ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಕುಶಾಲನಗರದಲ್ಲಿ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ ನೇತೃತ್ವದಲ್ಲಿ ಕುಶಾಲನಗರದ ಚೂಡೇಗೌಡ ಬಡಾವಣೆಯಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕುಶಾಲನಗರ ಯೋಜನಾ ಪ್ರಾಧಿಕಾರದ ಸದಸ್ಯ ವೈಶಾಖ್, ಕುಶಾಲನಗರ ಬಿಜೆಪಿ ಯುವ ಮೋರ್ಚಾ ಘಟಕದ ಅಧ್ಯಕ್ಷ ಚಂದ್ರು, ಪ್ರಮುಖರಾದ ನವನೀತ್, ಚಂದ್ರಶೇಖರ್, ಗಿರೀಶ್, ಸುನಿಲ್, ಡಿ.ಸಿ. ಮಂಜುನಾಥ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚೆಲುವರಾಜ್ ಮತ್ತಿತರರು ಇದ್ದರು.

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಮಾದಪಟ್ಟಣ ಅಂಗನವಾಡಿ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನದ ಅಂಗವಾಗಿ ಗಿಡಗಳನ್ನು ನೆಡಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ಮತ್ತು ಗುಡ್ಡೆಹೊಸೂರು ಗ್ರಾ.ಪಂ. ಸದಸ್ಯೆ ಪುಷ್ಪ ನಾಗೇಶ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್, ಅಂಗನವಾಡಿ ಕಾರ್ಯಕರ್ತೆ ಭವ್ಯ, ಬಿ.ಜೆ.ಪಿ. ಭೂತ್ ಅಧ್ಯಕ್ಷ ಸುರೇಶ್ ಮತ್ತು ಸದಸ್ಯರಾದ ಅನೀಲ್, ರಾಜೇಶ್, ಲೋಹಿತ್, ಗಿರೀಶ್ ಮುಂತಾದವರು ಹಾಜರಿದ್ದರು.ಪೆÇನ್ನಂಪೇಟೆ: ಇಲ್ಲಿಗೆ ಸಮೀಪದ ಮುಗುಟಗೇರಿ ಗ್ರಾಮದ ಗ್ರಾಮಸ್ಥರು ಗ್ರಾಮದ ಕುಟ್ಟಿಚಾತ ಅಂಬಲದ ಆವರಣದ ಸುತ್ತ ವಿವಿಧ ರೀತಿಯ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ಆಚರಿಸಿದರು. ಈ ಸಂದರ್ಭ ಗ್ರಾಮಸ್ಥರಾದ ಮುದ್ದಿಯಡ ಗಣೇಶ್, ಮಲ್ಚೀರ ಬೋಜಪ್ಪ, ಚೀರಂಡ ಶಿವಾಜಿ, ಮಲ್ಚೀರ ಪೆÇನ್ನಣ್ಣ, ಕಳ್ಳಿಚಂಡ ಅಶೋಕ್, ಚೀರಂಡ ಚಂಗಪ್ಪ, ಮುದ್ದಿಯಡ ನಿತಿನ್, ಮಲ್ಚೀರ ಗಣಪತಿ, ಚೀರಂಡ ಗಾಂಧಿ ಮುಂತಾದವರು ಗಿಡ ನೆಟ್ಟರು. ಚೀರಂಡ ಕಂದ ಸುಬ್ಬಯ್ಯ ಗಿಡಗಳನ್ನು ನೀಡಿದ್ದರು.

ನಾಪೆÇೀಕ್ಲು: ನಾಪೆÇೀಕ್ಲು ಬಿ.ಜೆ.ಪಿ. ಕಾರ್ಯಕರ್ತರು ಗ್ರಾಮದ ಶ್ರೀ ಭಗವತಿ ದೇವಾಲಯದ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣಾ ದಿನವನ್ನು ಆಚರಿಸಿದರು.

ಈ ಸಂದರ್ಭ ಬಿ.ಜೆ.ಪಿ. ಸ್ಥಾನೀಯ ಸಮಿತಿಯ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಮಡಿಕೇರಿ ತಾಲೂಕು ಕೃಷಿ ಮೊರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕೆಲೇಟಿರ ಸಾಬು ನಾಣಯ್ಯ, ಕಂಗಾಂಡ ಜಾಲಿ ಪೂವಪ್ಪ, ಕೆಲೇಟಿರ ದೀಪು ದೇವಯ್ಯ, ಪಾಡಿಯಮ್ಮಂಡ ಸುಭಾಸ್ ಮತ್ತಿತರರು ಇದ್ದರು.

ಸೋಮವಾರಪೇಟೆ: ಭಾರತೀಯ ಜನತಾ ಪಾರ್ಟಿಯ ವತಿಯಿಂದ ತಾಲೂಕಿನ ವಿವಿಧೆಡೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾದಾಪುರದ ಆರೋಗ್ಯ ಕೇಂದ್ರ ಹಾಗೂ ಹಾಡಗೇರಿ ದೇವಾಲಯದ ಆವರಣದಲ್ಲಿ ವನಮಹೋತ್ಸವ ಅಂಗವಾಗಿ ಗಿಡಗಳನ್ನು ನೆಟ್ಟರು. ಈ ಸಂದರ್ಭ ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಬಿಜೆಪಿ ತಾಲೂಕು ಘಟಕದ ಖಜಾಂಚಿ ನಾಪಂಡ ಉಮೇಶ್, ಪ.ಪಂ. ನಾಮನಿರ್ದೇಶನ ಸದಸ್ಯ ಶರತ್‍ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸೋಮವಾರಪೇಟೆ ಜೂನಿಯರ್ ಕಾಲೇಜಿನಲ್ಲಿ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಬಿಜೆಪಿ ಪದಾಧಿಕಾರಿಗಳು ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಿದರು. ಈ ಸಂದರ್ಭ ಪಕ್ಷದ ಮುಖಂಡರಾದ ಕಿಬ್ಬೆಟ್ಟ ಮಧು, ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್, ಪ್ರಮುಖರಾದ ಜಗನ್ನಾಥ್, ಕೊಮಾರಿ ಸತೀಶ್, ಜೀವನ್, ಚೇತನ್, ಪೃಥ್ವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕುಶಾಲನಗರ: ಕುಶಾಲನಗರದ ಜಾಮಿಯಾ ಮಸೀದಿ ಹಾಗೂ ಹಿಲಾಲ್ ಮಸೀದಿಯ ವತಿಯಿಂದ ವಿಶ್ವ ಪರಿಸರ ಸಂರಕ್ಷಣೆ ದಿನ ಆಚರಣೆ ನಡೆಯಿತು. ಇಂದಿರಾ ಬಡಾವಣೆಯ ಸ್ಮಶಾನದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಅಲೀಂ, ಭಾಷಾ, ಎಂ.ಇ. ಮೊಯಿದ್ದೀನ್ ಮತ್ತು ಹಿಲಾಲ್ ಮಸೀದಿ ಹಾಗೂ ಜಾಮಿಯಾ ಮಸೀದಿಯ ಪ್ರಮುಖರು ಇದ್ದರು.

ಕಡಂಗ: ಮಡಿಕೇರಿ ತಾಲೂಕು ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಪ್ರಯುಕ್ತ ನರಿಯಂದಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆÇೀದವಾಡ, ಅರಪಟ್ಟು ಗ್ರಾಮದ ಆಯುರ್ವೇದ ಆಸ್ಪತ್ರೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯರುಗಳಾದ ಉಮಾ ಪ್ರಭು, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ ತಮ್ಮಯ್ಯ, ತಾಲೂಕು ಒಬಿಸಿ ಮೋರ್ಚಾ ಅಧ್ಯಕ್ಷ ಕೊಲೆಯಂಡ ಗಿರೀಶ್, ಪಕ್ಷದ ಕಾರ್ಯಕರ್ತರುಗಳಾದ ಬಿ.ಎಸ್. ಸೋಮಪ್ಪ, ರತೀಶ್‍ಕುಮಾರ್, ಎ.ಯು. ಗಿರೀಶ್, ಎ.ಬಿ. ಸತೀಶ್, ಕೆ.ಜೆ. ಪ್ರಕಾಶ್, ಅನಿಲ್‍ಕುಮಾರ್ ಹಾಗೂ ಲೋಕೇಶ್ ಭಾಗವಹಿಸಿದ್ದರು.

ಕೂಡಿಗೆ: ಕೂಡಿಗೆ ಬಿಜೆಪಿ ಪಕ್ಷದ ವತಿಯಿಂದ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ವನಮಹೋತ್ಸವ ಕಾರ್ಯ ಕ್ರಮದ ಅಡಿಯಲ್ಲಿ ಪಕ್ಷದ ಪದಾಧಿಕಾರಿಗಳು ವಿವಿಧ ಜಾತಿ ಹಣ್ಣು ಗಿಡಗಳು ಮತ್ತು ವಿವಿಧ ಬಗೆಯ ಗಿಡಗಳನ್ನು ನೆಟ್ಟರು.

ಕುಶಾಲನಗರ ಕೃಷಿ ಉತ್ಪನ್ನ ಮಾರಾಟ ಸಂಘದ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಸಹಕಾರ ಸಂಘದ ನಿರ್ದೇಶಕ ಕೆ.ಕೆ. ಭೋಗಪ್ಪ. ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಗಿರೀಶ್ ಕುಮಾರ್, ಬಸವನತ್ತೂರು ಭೂತ್ ಸಮಿತಿಯ ಅಧ್ಯಕ್ಷ ಆರ್. ಕೃಷ್ಣ, ವಿವಿಧ ಘಟಕದ ಪದಾಧಿಕಾರಿಗಳಾದ ಇಂದಿರಾ, ಚಿಣ್ಣಪ್ಪ ಕೇಶವ ರೈ, ವರದರಾಜ್‍ದಾಸ್, ಕುಮಾರ್ ಸ್ವಾಮಿ, ಸುಬ್ಬಯ್ಯ, ಧರ್ಮರಾಜ್, ಲೋಕೇಶ್, ಜ್ಯೋತಿ, ಕೃಷ್ಣ, ಮಂಜಯ್ಯ ಸೇರಿದಂತೆ ಹಲವಾರು ಮಂದಿ ಇದ್ದರು.

ನಾಪೆÇೀಕ್ಲು: ಬೇತು ಗ್ರಾಮದ ಪ್ರಾಥಮಿಕ ಶಾಲೆಯ ಮೈದಾನದ ಬಳಿಯಲ್ಲಿ ಸ್ಥಳಿಯ ಬಿ.ಜೆ.ಪಿ. ಕಾರ್ಯಕರ್ತರು ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ಸಂರಕ್ಷಣಾ ದಿನವನ್ನು ಆಚರಿಸಿದರು. ಈ ಸಂದರ್ಭ ಚೋಕಿರ ಸಜೀತ್, ಸುಧಿ ಅಪ್ಪಯ್ಯ, ಗಣಪತಿ, ಕೃಷ್ಣಪ್ಪ, ನೀತಿನ್ ಇದ್ದರು.