ಕೂಡಿಗೆ, ಜು. 29: ಜಿಲ್ಲೆಯ ಆರೋಗ್ಯ ಇಲಾಖೆಯ ಮೂಲಕ ಪ್ರಥಮವಾಗಿ ಹೆಬ್ಬಾಲೆ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಕೊರೊನಾ ರ್ಯಾಪಿಡ್ ಆ್ಯಂಟಿಜನ್ ತಪಾಸಣೆ ನಡೆಸಲಾಯಿತು.
ರ್ಯಾಪಿಡ್ ತಪಾಸಣಾ ತಂಡವು ಇಂದು ಹುಲುಸೆ ಗ್ರಾಮದ 14 ಮಂದಿ, ತೊರೆನೂರಿನ 20 ಮಂದಿ ಹಾಗೂ ಹೆಬ್ಬಾಲೆಯ 10 ಮಂದಿಗಳ ಪರೀಕ್ಷೆ ನಡೆಸಿತು. ಇವುಗಳಲ್ಲಿ ಎಲ್ಲವೂ ನೆಗೆಟಿವ್ ಬಂದಿದೆ. ಈ ತಪಾಸಣೆಯ ನೇತೃತ್ವವನ್ನು ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಭರತ್ ವಹಿಸಿದ್ದರು. ಜಿಲ್ಲೆಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ತಂಡವು ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ್ದರು.