ಕೂಡಿಗೆ, ಜು. 29: ‘ಶಕ್ತಿ’ಯಲ್ಲಿ ಪ್ರಕಟಗೊಂಡ ರೋಗ ಭೀತಿಯಲ್ಲಿ ಬ್ಯಾಡಗೊಟ್ಟ ಗ್ರಾಮಸ್ಥರು ಎಂಬ ವರದಿ ಹಿನ್ನೆಲೆ ತಾಲೂಕು ಗಿರಿಜನ ಸಮನ್ವಯ ಅಧಿಕಾರಿ ಶೇಖರ್ ಕೂಡಿಗೆ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ನಿರ್ಮಿತಿ ಕೇಂದ್ರದ ಇಂಜಿನಿಯರ್ ಬಿ.ಎಸ್ ರವಿ. ಇವರುಗಳು ಹಾಡಿಯ ಪ್ರಮುಖರಾದ ಶಂಕರ್ ಅಪ್ಪು ಮುತ್ತ ಸೇರಿದಂತೆ ಹಲವಾರು ಮಂದಿಯ ಸಮ್ಮುಖದಲ್ಲಿ ಚರಂಡಿ ಯಲ್ಲಿ ನೀರು ನಿಂತ ಸ್ಥಳವನ್ನು ಪರಿಶೀಲನೆ ಮಾಡಿದರು. ಸಣ್ಣ ನೀರಾವರಿ ಇಲಾಖೆಯ ಮೂಲಕ ಕಾಲುವೆ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಅನುಮೋದನೆ ದೊರೆತ ಬಳಿಕ ಕಾಮಗಾರಿಗಳನ್ನು ಕೈಗೊಂಡು ಚರಂಡಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗುವುದು ಎಂದರು.