ಮಡಿಕೇರಿ, ಜು. 29: ಕೊರೊನಾ ಲಾಕ್‍ಡೌನ್‍ನಿಂದಾಗಿ ಮಸೀದಿಗಳಲ್ಲಿ ನಮಾಜ್‍ಗೆ ನಿರ್ಬಂಧ ಹೇರಲಾಗಿತ್ತು. ಇದೀಗ ನಿಯಮದಲ್ಲಿ ಸಡಿಲಿಕೆ ಇರುವುದರಿಂದ ಮಡಿಕೇರಿಯ ಜಾಮೀಯಾ ಮಸೀದಿಯಲ್ಲಿ ತಾ. 30 ರ ಶುಕ್ರವಾರದಿಂದ ಜುಮಾ ನಮಾಜ್ ಮಧ್ಯಾಹ್ನ 1 ಗಂಟೆಗೆ ನೆರವೇರಲಿದೆ. ತಾ. 31 ರಂದು ಬಕ್ರೀದ್ ಹಬ್ಬದ ಪ್ರಯುಕ್ತ ಸರಕಾರದ ಸೂಚನೆಯಂತೆ ಬೆಳಿಗ್ಗೆ 6.30ಕ್ಕೆ ನಮಾಜ್ ನೆರವೇರಲಿದೆ. ಕೋವಿಡ್ ನಿಯಮದಂತೆ ಅಂತರ ಕಾಯ್ದು ಕೊಂಡು 50 ಮಂದಿಗೆ ನಮಾಜ್‍ಗೆ ಅವಕಾಶ ನೀಡಲಾಗು ವುದು. ನಮಾಜ್‍ಗೆ ಬೇಕಾದ ಜಾನಿ ನಮಾಜ್ ಹಾಗೂ ವಜುವನ್ನು ಮನೆಯಿಂದಲೇ ವ್ಯವಸ್ಥೆ ಮಾಡಿ ಕೊಳ್ಳಬೇಕಿದೆ ಎಂದು ಮಸೀದಿ ಅಧ್ಯಕ್ಷ ಮೊಹ್ಮದ್ ಇಮ್ರಾನ್ ತಿಳಿಸಿದ್ದಾರೆ.