ಕರಿಕೆ, ಜು. 29: ಗ್ರಾಮದಲ್ಲಿ ಡೆಂಗ್ಯು, ಮಲೇರಿಯಾ ರೋಗವನ್ನು ನಿಯಂತ್ರಿಸುವ ಮುಂಜಾಗ್ರತಾ ಕ್ರಮವಾಗಿ ಕರಿಕೆಯಲ್ಲಿ ಸ್ಥಳೀಯ ಬಾಜಪ ಗ್ರಾಮ ಸಮಿತಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮಕ್ಕೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಮುಖ ಗವಸು ಹಾಗೂ ಕೈಗ್ಲೌಸ್ ವಿತರಿಸುವುದರ ಮೂಲಕ ಚಾಲನೆ ನೀಡಿದರು. ಸಮೀಪದ ಚೆಂಬೇರಿಯಿಂದ ಚೆತ್ತುಕಾಯವರೆಗೆ ಸ್ವಚ್ಛತಾ ಕಾರ್ಯದಲ್ಲಿ ಬಾಜಪ ಗ್ರಾಮ ಸಮಿತಿ ಅದ್ಯಕ್ಷ ಹೊಸಮನೆ ಹರೀಶ್, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧÀ್ಯಕ್ಷೆ ಕವಿತಾ ಪ್ರಭಾಕರ್, ಪ್ರಮುಖರಾದ ಕೋಡಿ ಪೆÇನ್ನಪ್ಪ, ನಿಡ್ಯಮಲೆ ಬಾಲಕೃಷ್ಣ, ವಿಜಯ ಸೇರಿದಂತೆ ಇತರ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸ್ವಚ್ಛತೆಯ ನಂತರ ನೆರೆದ ಕಾರ್ಯಕರ್ತರಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.