ವೀರಾಜಪೇಟೆ, ಜು. 28: ಪಟ್ಟಣದ 18ನೇ ವಾರ್ಡ್‍ನ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿ ಕೊರೊನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಳೆದ ನಾಲ್ಕು ದಿನಗಳ ಹಿಂದೆ ಸೀಲ್‍ಡೌನ್ ಮಾಡಿದ್ದು, ವಾರ್ಡ್ ಸದಸ್ಯೆ ಟಿ.ಕೆ. ಯಶೋಧ 10 ಮನೆಗಳಿಗೆ ತರಕಾರಿ, ದಿನಸಿ ಸಾಮಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಗರ ಸಮಿತಿ ಮಾಜಿ ಅಧ್ಯಕ್ಷ ಅಂಜಪರವಂಡ ಅನಿಲ್ ಮಂದಣ್ಣ ಹಾಗೂ ಇತರರು ಇದ್ದರು.