ಶನಿವಾರಸಂತೆ, ಜು. 28: ಶನಿವಾರಸಂತೆ ಗ್ರಾ.ಪಂ. ವ್ಯಾಪ್ತಿಯ ಶನಿವಾರಸಂತೆ ಮಧ್ಯಪೇಟೆಯಿಂದ ಕಾವೇರಿ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ವಾಸವಿರುವ 12 ವರ್ಷದ ಬಾಲಕಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೊರೊನಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಸೋಂಕಿತೆಯ ತಂದೆ, ತಾಯಿ ಇಬ್ಬರು ಸಹ ಕೊರೊನಾ ಸೋಂಕಿತರಾಗಿದ್ದು, ಮೂವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗ್ರಾ.ಪಂ.ನಿಂದ ಸೋಂಕಿತರ ಮನೆಯ ಸುತ್ತಮುತ್ತ ಸಾರ್ವಜನಿಕ ರಸ್ತೆಗೆ ಔಷಧಿ ಸಿಂಪಡಿಸಲಾಯಿತು.
ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಾರಳ್ಳಿ ಗ್ರಾಮದ 38 ವರ್ಷ ವಯಸ್ಸಿನ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತೆಯ ಮನೆಯ ಸುತ್ತಮುತ್ತ ಸೀಲ್‍ಡೌನ್ ಮಾಡಿ ಗೌಡಳ್ಳಿ ಪಂಚಾಯಿತಿ ವತಿಯಿಂದ ಔಷಧಿ ಸಿಂಪಡಿಸಲಾಗಿದೆ.
ಗೌಡಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಸ್.ಪಿ. ಲಿಖಿತಾ, ಆರೋಗ್ಯಾಧಿಕಾರಿ ಡಾ. ಇಂದೂದರ್, ಗ್ರಾಮ ಲೆಕ್ಕಾಧಿಕಾರಿಗಳಾದ ಮಂಜುನಾಥ್, ಜಟ್ಟೆಪ್ಪ, ನಾಡ ಕಚೇರಿ ಸಿಬ್ಬಂದಿ ಯೋಗೇಶ್, ಗ್ರಾ.ಪಂ. ಸಿಬ್ಬಂದಿಗಳಾದ ವಸಂತ, ಹೂವಯ್ಯ ಹಾಜರಿದ್ದರು.