ವೀರಾಜಪೇಟೆ, ಜು. 28: ಕಾಫಿ ವಂಚನೆ ಪ್ರಕರಣದಲ್ಲಿ ಆರೋಪಿಗಳೊಂದಿಗೆ ಪರಿಗಣಿಸಲಾಗಿರುವ ವ್ಯಕ್ತಿಗಳಿಗೆ ಅಪರ ಜಿಲ್ಲಾ ನ್ಯಾಯಾಲಯವು ಜಾಮೀನು ನೀಡಿದೆ.

ವೀರಾಜಪೇಟೆಯ ಮಗ್ಗಲ ಗ್ರಾಮದಲ್ಲಿರುವ ಧಾನ್ಯಲಕ್ಷಿ ್ಮ ಕಾಫಿ ಕ್ಯೂರಿಂಗ್ ವಕ್ರ್ಸ್‍ನ ಪಾಲುದಾರರ ಮೇಲೆ ಕಾಫಿ ಬೆಳೆಗಾರರಿಂದ ಕಾಫಿ ಖರೀದಿಸಿ ಹಣ ನೀಡದೆ ವಂಚಿಸಿದ್ದಾರೆ ಎಂದು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ. 417 ಮತ್ತು 420 ಅರ್/34 ವಿಧಿ ಪ್ರಕಾರ ಮೊಕದ್ದಮೆ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ. ಆರೋಪಿಗಳಾದ ವಿ.ಕೆ. ಗುರುಪ್ರಸಾದ್ ಮತ್ತು ವಿ.ಕೆ. ಚಂದ್ರಿಕಾ ಅವರ ಮೇಲೆ ದಾವೆ ನ್ಯಾಯಾಲಯದಲ್ಲಿ ದಾಖಲಾಗಿತ್ತು. ವೀರಾಜಪೇಟೆ 2ನೇ ಅಪರ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ತಲಾ ಒಬ್ಬರಿಗೆ 50000 ರೂ. ನಗದು ಬಾಂಡ್ ಮತ್ತು ಶ್ಯೂರಿಟಿ ಅಧಾರದ ಮೇಲೆ ಜಾಮೀನು ನೀಡಿದೆ.

ಆರೋಪಿತರ ಪರ ವಕೀಲ ಚೊವಂಡ ಕೆ. ಪೊನ್ನಣ್ಣ ಮತ್ತು ನವೀನ್ ವಿ.ಅರ್. ಅವರು ವಾದ ಮಂಡಿಸಿದರು.

- ಕೆ.ಕೆ.ಎಸ್.