ಮಡಿಕೇರಿ, ಜು. 28: ವೀರಾಜಪೇಟೆ ತಾಲೂಕು ನಲ್ಲೂರು ಗ್ರಾಮದಲ್ಲಿ ಯಾಂತ್ರೀಕೃತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಅತಿ ಹೆಚ್ಚು ಇಳುವರಿ ಪಡೆದುಕೊಳ್ಳುತ್ತಿರುವ ಹಾಗೂ “ಉತ್ತಮ ಕೃಷಿಕ ಪ್ರಶಸ್ತಿ’’ ಪುರಸ್ಕಾರ ಪಡೆದಿರುವ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರನ್ನು ಬಿಜೆಪಿ ತಾಲೂಕು ಕೃಷಿ ಮೋರ್ಚ ಸಮಿತಿ ಸದಸ್ಯರಿಂದ ಅವರ ನಲ್ಲೂರು ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾ ಮೊರ್ಚಾದ ಅಧ್ಯಕ್ಷೆ ಮಲಚೀರ ಕವಿತ, ಕೃಷಿ ಮೋರ್ಚಾ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ಉಪಾಧ್ಯಕ್ಷ ಚಟ್ಟಮಾಡ ಅನಿಲ್, ಗುಡ್ಡಮಾಡ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ತೊರೀರ ವಿನು, ಕಾರ್ಯದರ್ಶಿ ಅಣ್ಣಳಮಾಡ ನವಿನ್ ದೇವಯ್ಯ, ಖಜಾಂಚಿ ಪ್ರದೀಪ್, ವೀರಾಜಪೇಟೆ ತಾಲೂಕು ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಚೆಟ್ಟಂಗಡ ಮಹೇಶ್ ಮಂದಣ್ಣ, ಬಿಜೆಪಿ ಮುಖಂಡರಾದ ಕಟ್ಟೇರ ಚಲನ್, ನೂರೇರ ವಿಜು, ಮೋರ್ಚಾದ ಸದಸ್ಯರುಗಳು ಹಾಜರಿದ್ದರು.