ಸಂಪಾಜೆ, ಜು. 28: ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಯನಾಡು ಸರಕಾರಿ ಶಾಲೆಯಲ್ಲಿ ಶ್ರಮದಾನ ಕಾರ್ಯ ನಡೆಸಲಾಯಿತು. ಶಾಲಾ ವಠಾರದ ಸುತ್ತುಮುತ್ತಲಿನ ಕಾಡು ಕಡಿದು, ಕಸ ವಿಲೇವಾರಿ ಮಾಡಿ ಸ್ವಚ್ಛತೆಯನ್ನು ಕಾಪಾಡಿದರು. ಈ ಕಾರ್ಯದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗದೀಶ್ ಪರ್ಮಲೆ, ಶಾಲಾ ಮುಖ್ಯ ಶಿಕ್ಷಕಿ ಸುಲೋಚನಾ ಭಟ್, ಊರಿನವರು, ವಿದ್ಯಾರ್ಥಿ ಪೆÇೀಷಕರು, ಹಳೆ ವಿದ್ಯಾರ್ಥಿ ಸಂಘದವರು, ಬೋಧಕ ವೃಂದದವರು ಭಾಗವಹಿಸಿದ್ದರು.