ಶ್ರೀಮಂಗಲ, ಜು. 28 : ಗೋಣಿಕೊಪ್ಪದಿಂದ ಕುಟ್ಟದ ಕಡೆಗೆ ಆಟೋ ರಿಕ್ಷಾದಲ್ಲಿ ಮದ್ಯವನ್ನು ಮಾರಾಟ ಮಾಡಲು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೊಬ್ಬರನ್ನು ಶ್ರೀಮಂಗಲ ಪೆÇಲೀಸರು ಬಂಧಿಸಿದ್ದಾರೆ. ಕುಟ್ಟ - ಸಿಂಕೋನ ಗ್ರಾಮದ ಸಂಪತ್ (60) ಬಂಧಿತ ಆರೋಪಿ. ಆರೋಪಿಗೆ ಸೇರಿದ (ಕೆ.ಎ. 12 ಬಿ. 0978) ಆಟೋದಲ್ಲಿ ಅಕ್ರಮವಾಗಿ ಕುಟ್ಟದಲ್ಲಿ ಮಾರಾಟ ಮಾಡಲು ಮದ್ಯವನ್ನು ಸಾಗಿಸಲಾಗುತಿತ್ತು. ಅಕ್ರಮ ಮದ್ಯ ಹಾಗೂ ಆಟೋವನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಕಾರ್ಯಚರಣೆಯಲ್ಲಿ ಶ್ರೀಮಂಗಲ ಠಾಣೆ ಉಪನಿರೀಕ್ಷಕ ಮಂಚಯ್ಯ, ಸಹಾಯಕ ಉಪ ನಿರೀಕ್ಷಕ ಸಾಬು, ಹೆಡ್ಕಾನ್ಸ್ಟೇಬಲ್ ಸ್ಟೀಫನ್ ಡಿಸೋಜ, ಕಾನ್ಸ್ಟೇಬಲ್ ಸುಕುಮಾರ್ ಪಾಲ್ಗೊಂಡಿದ್ದರು.