ಮಡಿಕೇರಿ, ಜು. 27: ಕೊಡಗು ಜಿಲ್ಲೆಯಲ್ಲಿ ಕೋವಿಗೆ ಪರವಾನಗಿ ನೀಡುವಲ್ಲಿ ಅರಣ್ಯ ಇಲಾಖೆ ತೊಡರುಗಾಲು ಹಾಕುವದರೊಂದಿಗೆ, ಕಾನೂನಿನ ಸಬೂಬು ಹೇಳತೊಡಗಿದೆ ಎಂದು ಜಿಲ್ಲೆಯ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಸರಕಾರದ ಸಾಧನಾ ಕಾರ್ಯಕ್ರಮ ಬಳಿಕ ನಡೆದ ಸಭೆಯಲ್ಲಿ ಶಾಸಕ ಕೆ.ಜಿ.ಬೋಪಯ್ಯ ವಿಷಯ ಪ್ರಸ್ತಾಪಿಸಿದರು. ಈ ವೇಳೆ ಮತ್ತೋರ್ವ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಧನಿಗೂಡಿಸಿದರು.ಜಿಲ್ಲೆಯಲ್ಲಿ ಕೊಡಗಿನ ಪದ್ಧತಿಯಂತೆ ಗಂಡು ಮಗು ಹುಟ್ಟಿದಾಗ ಹಾಗೂ ಹಿರಿಯರು ತೀರಿಕೊಂಡಾಗ ಅವಶ್ಯಕ ಕೋವಿ ಬಳಕೆಯೊಂದಿಗೆ ಗುಂಡು ಹಾರಿಸುವ ಪರಂಪರೆ ಇದ್ದು, ಗ್ರಾಮೀಣ ಜನತೆಯ ಕೋವಿಗಳ ಪರವಾನಗಿ ತಿದ್ದುಪಡಿ, ನೂತನವಾಗಿ ಬಂದೂಕು ಪರವಾನಗಿ ನೀಡಲು ಅರಣ್ಯಾಧಿಕಾರಿಗಳು ಆಕ್ಷೇಪಿಸುತ್ತಿರುವದಾಗಿ ಟೀಕಿಸಿದರು.