ಮಡಿಕೇರಿ, ಜು. 25: ಹುಮ್ಯಾನಿಟಿ ಫಸ್ಟ್ ಇಂಡಿಯಾ ಮಡಿಕೇರಿ ವತಿಯಿಂದ ನಗರಸಭೆಯ ಸ್ವಚ್ಛತಾ ಕಾರ್ಮಿಕರ ಸೇವೆಯನ್ನು ಗುರುತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಹುಮ್ಯಾನಿಟಿ ಫಸ್ಟ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಶರೀಫ್, ಕೊರೊನಾ ಮಹಾಮಾರಿಯನ್ನು ಹಿಮ್ಮೆಟ್ಟಿಸುವಲ್ಲಿ ಸ್ವಚ್ಛತಾ ಕಾರ್ಮಿಕರ ಪಾತ್ರದ ಬಗ್ಗೆ, ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ 60ಕ್ಕೂ ಹೆಚ್ಚು ಕಾರ್ಮಿಕರಿಗೆ ಮಾಸ್ಕ್ ಹಾಗೂ ಲಘು ಪಾನೀಯದ ವ್ಯವಸ್ಥೆ ಮಾಡಲಾಯಿತು. ನಗರಸಭೆ ಆರೋಗ್ಯ ಅಧಿಕಾರಿ ಇದ್ದರು.