ಶನಿವಾರಸಂತೆ, ಜು. 25: ಬಗರ್ ಹುಕುಂ ಸಾಗುವಳಿದಾರರಿಗೆ ಹಾಗೂ ಬುಡಕಟ್ಟು ಆದಿವಾಸಿಗಳಿಗೆ ಹಾಗೂ ಇತರ ಪಾರಂಪಾರಿಕ ಅರಣ್ಯವಾಸಿಗಳಿಗೆ ಭೂಮಿ ಹಕ್ಕುಪತ್ರ ನೀಡುವಂತೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಕೊಡಗು ಜಿಲ್ಲೆಯ ಅಧ್ಯಕ್ಷ ಎಸ್.ಕೆ. ಪುಟ್ಟಸ್ವಾಮಿ ಹಾಗೂ ಸೋಮವಾರಪೇಟೆ ಕ್ಷೇತ್ರ ಸಂಚಾಲಕ ಬಿ.ಕೆ. ಧರ್ಮಪ್ಪ ಒತ್ತಾಯಿಸಿದ್ದಾರೆ.