ವೀರಾಜಪೇಟೆ, ಜು. 25: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕವಾಗಿ ಅರಿವು ಮೂಡಿಸಲು ಪಟ್ಟಣದ ವಿವಿಧೆಡೆಗಳಲ್ಲಿ ವಾರ್ಡ್ ಮಟ್ಟದಲ್ಲಿ ಕೊರೊನಾ ಜಾಗೃತಿ ಸಮಿತಿಯನ್ನು ಸರಕಾರದ ಆದೇಶದಂತೆ ರಚಿಸಲಾಗುತ್ತಿದೆ. ಇದರಲ್ಲಿ ಪಟ್ಟಣದ ಪ್ರತಿಯೊಬ್ಬರು ಕೊರೊನಾ ವೈರಸ್ ಹರಡದಂತೆ ಜಾಗೃತಿ ಸಮಿತಿಯೊಂದಿಗೆ ಸಹಕರಿಸಬೇಕು ಎಂದು ಪಟ್ಟಣ ಪಂಚಾಯಿತಿ ಅಭಿಯಂತರ ಎಂ.ಎನ್. ಹೇಮ್ಕುಮಾರ್ ಹೇಳಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ನೇತೃತ್ವದಲ್ಲಿ ಪ್ರತಿ ವಾರ್ಡ್ಗಳ ಸದಸ್ಯರುಗಳ ಉಸ್ತುವಾರಿಯಲ್ಲಿ ಕೊರೊನಾ ಜಾಗೃತಿ ಸಮಿತಿ ರಚನೆಯ ಸಭೆ ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಸಾರ್ವಜನಿಕ ಆಸ್ಪತ್ರೆಯ ಡಾ. ವಿಶ್ವನಾಥ್ ಸಿಂಪಿ ಮಾತನಾಡಿ, ಸಮಿತಿಗೆ ಎಲ್ಲ ರೀತಿಯಿಂದಲೂ ಸಾರ್ವಜನಿಕ ಆಸ್ಪತ್ರೆ ಮುಕ್ತವಾಗಿ ಸಹಕರಿಸಲಿದೆ ಎಂದರು. ಸಭೆಯಲ್ಲಿ ಹದಿಮೂರನೇ ವಾರ್ಡ್ನ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಬಿ. ಹರ್ಷವರ್ಧನ್, ಹದಿನಾಲ್ಕನೇ ವಾರ್ಡ್ನ ಸಿ.ಕೆ. ಪೃಥ್ವಿನಾಥ್, ಹದಿನೈದನೇ ವಾರ್ಡ್ನ ಟಿ. ಎಂಜೂನಾ ಭಾಗವಹಿಸಿದ್ದು ಪ್ರತಿ ವಾರ್ಡ್ಗೆ ತಲಾ ಮೂರು ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡುವಂತೆ ಸೂಚಿಸಿ ಸಲಹೆ ನೀಡಿದರು.
ಸಭೆಯಲ್ಲಿ ವಾರ್ಡ್ನ ಕೊರೊನಾ ಜಾಗೃತಿ ಸಮಿತಿಗೆ, ಹದಿಮೂರನೇ ವಾರ್ಡ್ಗೆ ಬಿ.ಜಿ. ಸಾಯಿನಾಥ್, ಸುನಿಲ್ಕುಮಾರ್, ರಜಿತಾ, ಹದಿನಾಲ್ಕನೇ ವಾರ್ಡ್ಗೆ ಅಂತೋಣಿ, ಶೀಬಾ ಪೃಥ್ವಿನಾಥ್, ಷಂಶುದ್ದೀನ್, ಹದಿನೈದನೇ ವಾರ್ಡ್ಗೆ ದಿನು ಅಪ್ಪಚ್ಚು, ವಸಂತ್ಕುಮಾರ್ ಹಾಗೂ ಫಾತಿಮಾ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸದ್ಯದಲ್ಲಿಯೇ ಕೊರೊನಾ ಜಾಗೃತಿ ಸಮಿತಿ ತನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ ಎಂದು ಸದಸ್ಯ ಕೆ.ಬಿ. ಹರ್ಷವರ್ಧನ್ ಸಭೆಗೆ ತಿಳಿಸಿದರು.