ಸಿದ್ದಾಪುರ, ಜು. 25: ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಸಿದ್ದಾಪುರ ವ್ಯಾಪ್ತಿಯ ನಿಬರ್ಂಧಿತ ಪ್ರದೇಶಗಳ ಕುಟುಂಬಗಳಿಗೆ ಎಸ್.ಡಿ.ಪಿ.ಐ. ಕಾರ್ಯಕರ್ತರು ಆಹಾರ ಕಿಟ್ ವಿತರಿಸಿದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ರಸ್ತೆ, ಹಳೇ ಸಿದ್ದಾಪುರ ಮತ್ತು ಎಂ.ಜಿ. ರಸ್ತೆ ವ್ಯಾಪ್ತಿಯಲ್ಲಿ ನಾಲ್ಕು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದ ಹಿನ್ನೆಲೆ ಕಳೆದ 12 ದಿನಗಳಿಂದ ಈ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿತ್ತು. ಕಿಟ್ ವಿತರಣೆಯಲ್ಲಿ ಎಸ್.ಡಿ.ಪಿ.ಐ. ಪ್ರಮುಖರಾದ ಅಶ್ರಫ್, ಜಂಶೀರ್, ಯಾಸರ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶೌಕತ್ ಅಲಿ, ಸಂಶೀರ್ ಮತ್ತಿತರರು ಇದ್ದರು.