ಶ್ರೀಮಂಗಲ, ಜು. 24: ಅಂತರ್ರಾಜ್ಯ ಗಡಿ ಪ್ರದೇಶ ಕುಟ್ಟದಲ್ಲಿ ಮದ್ಯ ಮಾರಾಟ ಲಾಕ್ಡೌನ್ ನಂತರವೂ ನಿರ್ಬಂಧಿಸಿರುವುದರಿಂದ ಅಕ್ರಮವಾಗಿ ಮದ್ಯವನ್ನು ತಂದು ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಮದ್ಯ ಮಾರಾಟವನ್ನು ಗಡಿ ಪ್ರದೇಶದಲ್ಲಿ ನಿರ್ಬಂಧಿಸಿರುವುದರಿಂದ ಮದ್ಯ ಮಳಿಗೆ ತೆರೆದು ಮಾರಾಟ ಮಾಡಲು ಅಬಕಾರಿ ಇಲಾಖೆ ಅವಕಾಶ ಕಲ್ಪಿಸುವಂತೆ ಕುಟ್ಟ ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಮುಕ್ಕಾಟೀರ ನವೀನ್ ಒತ್ತಾಯಿಸಿದ್ದಾರೆ.
ಕುಟ್ಟದಲ್ಲಿ ಮದ್ಯ ಮಾರಾಟ ನಿರ್ಬಂಧಿಸಿರುವುದರಿಂದ ಇತರ ಪ್ರದೇಶಗಳಾದ ಶ್ರೀಮಂಗಲ, ಕಾನೂರು, ಪೆÇನ್ನಂಪೇಟೆ ಮುಂತಾದೆಡೆಯಿಂದ ಮದ್ಯ ತಂದು ಕುಟ್ಟ ವ್ಯಾಪ್ತಿಯಲ್ಲಿ ಅಧಿಕ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಹಲವೆಡೆ ಶಾಲಾ ಮಕ್ಕಳಿಂದ ಮದ್ಯ ಮಾರಾಟವನ್ನು ಮಾಡಿಸಲಾಗುತ್ತಿದೆ. ಮೂರು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.