ಮಡಿಕೇರಿ, ಜು. 24: ಮಾಸ್ಟರ್ ಆಫ್ ಡೆಂಟಲ್ ಸರ್ಜರಿ (ಎಂಡಿಎಸ್) ಸ್ನಾತಕೋತ್ತರ ಪದವಿಯಲ್ಲಿ ಡಾ. ಕೆ. ವರ್ಷಾ ರವಿ ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ್ದು, ಮಣಿಪಾಲ ಯೂನಿವರ್ಸಿಟಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ನಂತರದಲ್ಲಿ ಕೊಡಗು ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರೈಸಿ, ಮಂಗಳೂರಿನ ಸಂತ ಅಗ್ನೆಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾಳೆ. ಮಂಗಳೂರಿನ ಎ.ಬಿ ಶೆಟ್ಟಿ ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್ ಪೂರೈಸಿರುವ ಈಕೆ ಮಡಿಕೇರಿಯ ಮೂಳೆ ತಜ್ಞ ಡಾ. ಕೆ. ರವಿ ಅಪ್ಪಾಜಿ ಹಾಗೂ ಪೂರ್ಣಿಮಾ ದಂಪತಿಯ ಪುತ್ರಿ. ಈಕೆಯ ಸಹೋದರ ಡಾ. ಜೀವನ್ ಕೂಡ ಮೂಳೆ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.