ಮುಳ್ಳೂರು, ಜು. 24: ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ವಿಶ್ವಮಟ್ಟದಲ್ಲಿ ಜನಮನ್ನಣೆ ಗಳಿಸಿರುವ ರೋಟರಿ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದು ಸದಸ್ಯರಿಗೆ ಹೆಮ್ಮೆಯ ವಿಷಯ ಎಂದು ರೋಟರಿ ಕ್ಲಬ್ ಕೊಡಗು ಜಿಲ್ಲಾ ರಾಜ್ಯಪಾಲ ಸುರೇಶ್ ಚಂಗಪ್ಪ ಅಭಿಪ್ರಾಯಪಟ್ಟರು. ಸಮೀಪದ ಆಲೂರುಸಿದ್ದಾಪುರ ಮಲ್ಲೇಶ್ವರ ರೋಟರಿ ಕ್ಲಬ್‍ನ 2020-21ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು. ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು 115 ವರ್ಷಗಳ ಹಿಂದೆ ಸ್ಥಾಪಿತವಾದ ರೋಟರಿ ಸಂಸ್ಥೆಯಲ್ಲಿ ಇಂದು ವಿಶ್ವದ್ಯಾದಂತ 12 ಲಕ್ಷ ಸದಸ್ಯರು ತೊಡಗಿಸಿಕೊಂಡಿದ್ದಾರೆ ಎಂದರು. ಸಂಸ್ಥೆಯ ಸದಸ್ಯರು ರಾಷ್ಟ್ರ ಮತ್ತು ಸಮಾಜವನ್ನು ಅಭಿವೃದ್ಧಿಗೊಳಿಸಬೇಕೆಂದರು. ರೋಟರಿ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವ ಸದಸ್ಯರಿಗೆ ಸಂಸ್ಥೆ ಗೌರವ, ಶಿಸ್ತು, ಬದ್ದತೆ, ಮಾನವಿಯ ಮೌಲ್ಯ, ಸಾಮಾಜಿಕ ಗುಣವನ್ನು ಕಲಿಸಿಕೊಡುತ್ತದೆ ಎಂದರು. ದೇಶದ್ಯಾದಂತ ಕೋವಿಡ್-19 ವೈರಸ್ ಹರಡುತ್ತಿದ್ದು ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯ ಸದಸ್ಯರು ಜನ ಜಾಗೃತಿಗೊಳಿಸುವ ಮೂಲಕ ನಿರ್ಮೂಲನೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

2020-21ನೇ ಸಾಲಿನ ಸಹಾಯಕ ರಾಜ್ಯಪಾಲ ಪಿ.ಕೆ.ರವಿ ಮಾತನಾಡಿ, ರೋಟರಿ ಸಂಸ್ಥೆಯಿಂದ ಆರೋಗ್ಯ ಶಿಬಿರ, ಪರಿಸರ ಕಾರ್ಯಕ್ರಮ, ಸರಕಾರಿ ಶಾಲೆಗಳ ಅಭಿವೃದ್ಧಿ, ಗಿಡನೆಡುವ ಕಾರ್ಯಕ್ರಮ ಸೇರಿದಂತೆ ಹಲವಾರು ಸಮಾಜ ಕಾರ್ಯವನ್ನು ಹಮ್ಮಿಕೊಳ್ಳಲು ಉದ್ದೇಶಿಸಿತ್ತು. ಆದರೆ ಈಗ ಕೋವಿಡ್-19 ಸಮಸ್ಯೆಯಿಂದ ಸ್ವಲ್ಪ ವಿಳಂಬವಾಗಿದ್ದು, ಮುಂದಿನ ದಿನದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದೇವೆ ಎಂದರು.

ನೂತನ ಅಧ್ಯಕ್ಷ ಎ.ಎಸ್.ರಾಮಣ್ಣ ಅಧಿಕಾರ ಸ್ವೀಕರಿಸಿ ಮಾತನಾಡಿ, ಮುಂದಿನ ದಿನದಲ್ಲಿ ಆಲೂರುಸಿದ್ದಾಪುರ ರೋಟರಿ ಸಂಸ್ಥೆ ವತಿಯಿಂದ ರೋಟರಿ ವ್ಯಾಪ್ತಿಯನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಎಲ್ಲ ರೋಟರಿ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು.

ನಿಕಟಪೂರ್ವ ಅಧ್ಯಕ್ಷ ಎಚ್.ಈ.ತಮ್ಮಯ್ಯ ರೋಟರಿ ಸಂಸ್ಥೆಯ ಬೆಳವಣಿಗೆಗೆ ಇನ್ನು ಮುಂದೆಯೂ ಸಹಕಾರ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ 2029-21ಸಾಲಿನ ರೋಟರಿ ಕ್ಲಬ್ ಜಿಲ್ಲಾ ಪ್ರಮುಖ ಕೆ.ಎಂ.ಜೇಕಬ್ ಮಾತನಾಡಿದರು. ನೂತನ ಕಾರ್ಯದರ್ಶಿ ಎ.ಎನ್.ತ್ಯಾಗರಾಜ್, ನಿಕಟಪೂರ್ವ ಕಾರ್ಯದರ್ಶಿ ಸಂಪತ್ ಹಾಜರಿದ್ದರು. ರೋಟರಿ ಕ್ಲಬ್‍ನ ಪದಾಧಿಕಾರಿಗಳು ಸರ್ವ ಸದಸ್ಯರು ಭಾಗವಹಿಸಿದ್ದರು. ಕೋವಿಡ್-19 ವೈರಸ್ ಹಿನ್ನೆಲೆ ಪದಗ್ರಹಣ ಕಾರ್ಯಕ್ರಮವನ್ನು ಸರಳ ಮತ್ತು ವ್ಯಕ್ತಿಗತ ಅಂತರ ಮೂಲಕ ನಡೆಸಲಾಯಿತು.

-ಭಾಸ್ಕರ್ ಮುಳ್ಳೂರು