ಗೋಣಿಕೊಪ್ಪಲು, ಜು. 23: ಕಾಣೆಯಾಗಿದ್ದ ವಿವಾಹಿತ ಮಹಿಳೆ ಹೆಣವಾಗಿ ಪತ್ತೆಯಾದ ನಂತರ ಈಕೆಯ ಮಗುವಿನ ಹುಡುಕಾಟದಲ್ಲಿ ಪೊಲೀಸರು ಶೋಧಕಾರ್ಯವನ್ನು ಮುಂದುವರೆಸಿದ್ದಾರೆ. ಗುರುವಾರ ಮುಂಜಾನೆಯಿಂದ ನಲ್ಲೂರಿನ ಕೀರೆ ಹೊಳೆಯ ಬದಿಯಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಡಿ.ಕುಮಾರ್ ಹಾಗೂ ಸಿಬ್ಬಂದಿಗಳು ಸತತ ಶೋಧ ನಡೆಸಿದರೂ ಮಗುವಿನ ಸುಳಿವು ಲಭ್ಯವಾಗಲಿಲ್ಲ. ಹೊಳೆಯಲ್ಲಿ ಕ್ಯಾಟ್ಫೀಶ್ಗಳು, ಸೀಳುನಾಯಿಗಳು ಅಧಿಕವಿದೆ ಎಂದು ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೂ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದು, ನಾಳೆಯೂ ಕಾರ್ಯಾಚರಣೆ ಮುಂದುವರೆಸುವು ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.